Home ಟಾಪ್ ಸುದ್ದಿಗಳು ಬಿಜೆಪಿ ಕಾರ್ಯಕರ್ತರಿಗೆ ಮೋದಿ ಇಂದು ಭಾಷಣ: ಡಿ.6ಕ್ಕೆ ‘INDIA’ ಸಭೆ

ಬಿಜೆಪಿ ಕಾರ್ಯಕರ್ತರಿಗೆ ಮೋದಿ ಇಂದು ಭಾಷಣ: ಡಿ.6ಕ್ಕೆ ‘INDIA’ ಸಭೆ

ನವದೆಹಲಿ: INDIA ಮೈತ್ರಿ ಕೂಟದ ನಾಯಕರ ಸಭೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.6ರಂದು ಸಭೆ ಕರೆದಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಸೋಲು, ಗೆಲುವಿನ ಬಗ್ಗೆ ಚರ್ಚಿಸೋದಕ್ಕೆ ಈ ಸಭೆ ಕರೆಯಲಾಗಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಯಲ್ಲಿ
ಇಂದು ಸಂಜೆ 6.30ಕ್ಕೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. 2024 ರ ಮೆಗಾ ಯುದ್ಧಕ್ಕೆ ಮುಂಚಿತವಾಗಿ ಚುನಾವಣೆಗಳು ಬಿಜೆಪಿಯ ಹಾದಿಯಲ್ಲಿ ಸಾಗುತ್ತಿರುವಂತೆ ತೋರುತ್ತಿರುವುದರಿಂದ, ಪ್ರಧಾನಿ ಮೋದಿ ಇಂದು ಸಂಜೆ 6:30 ಕ್ಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೆಲಂಗಾಣದಲ್ಲಿ ಕೆಸಿಆರ್ ಹಾಗೂ ಅವರ ಪುತ್ರ ಹಿನ್ನಡೆಯೊಂದಿಗೆ ಕಾಂಗ್ರೆಸ್ ಮುನ್ನಡೆ ಹೊಂದಿದೆ. ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಹುಮತದತ್ತ ಬಿಜೆಪಿ ದಾಪುಗಾಲಿಡುತ್ತಿದೆ. ಛತ್ತೀಸ್ ಗಢದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

Join Whatsapp
Exit mobile version