Home ಟಾಪ್ ಸುದ್ದಿಗಳು ಮೋದಿ ಮೊಸಳೆ ಹಿಡಿದ ಕಥೆ ಪಠ್ಯಪುಸ್ತಕ ಸೇರ್ಪಡೆ!

ಮೋದಿ ಮೊಸಳೆ ಹಿಡಿದ ಕಥೆ ಪಠ್ಯಪುಸ್ತಕ ಸೇರ್ಪಡೆ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬಾಲ್ಯದಲ್ಲಿ ಮೊಸಳೆ ಹಿಡಿದಿದ್ದರು ಎನ್ನಲಾದ ವಿಷಯ ಇದೀಗ ಶಾಲಾ ಪಠ್ಯಪುಸ್ತಕ ಸೇರ್ಪಡೆಯಾಗಿದೆ.


ತಮಿಳುನಾಡಿನ ಖಾಸಗಿ ಶಾಲೆಯೊಂದು ನೈತಿಕ ಪಾಠದಲ್ಲಿ ಮೋದಿಯವರ ಈ ಸಾಹಸವನ್ನು ಸೇರಿಸಿದೆ.
ಬ್ಯಾರಿ ಓಬ್ರಿಯನ್ ಮತ್ತು ಫೈರ್ ಫ್ಲೈ ಪ್ರಕಾಶನ ಹೊರತಂದಿರುವ ಒಂದನೇ ತರಗತಿಯ ನೀತಿ ಪಾಠ ಪುಸ್ತಕದಲ್ಲಿ ಮೋದಿಯವರು ಬಾಲ್ಯದಲ್ಲಿ ತೋರಿದ ಈ ಘಟನೆಯನ್ನು ಉಲ್ಲೇಖಿಸಲಾಗಿದೆ.


ಮೋದಿಯವರನ್ನು ವಿವರಿಸುವ ಶಾಲಾ ಪಠ್ಯಪುಸಕ್ತವು, ನರೇಂದ್ರ ದಾಮೋದರ ದಾಸ್ ಮೋದಿ ಅವರು ಭಾರತದ 14ನೇ ಹಾಗೂ ಹಾಲಿ ಪ್ರಧಾನಿಯಾಗಿದ್ದಾರೆ. ಅವರು ತಮ್ಮ ಬಾಲ್ಯದಲ್ಲಿ ಧೈರ್ಯವಂತರಾಗಿದ್ದರು. ಒಮ್ಮೆ ಅವರು ಮೊಸಳೆಯನ್ನು ಹಿಡಿದು ಮನೆಗೆ ತಂದಿದ್ದರು ಎಂದು ಬರೆಯಲಾಗಿದ್ದು, ಅವರ ಧೈರ್ಯವನ್ನು ಕೊಂಡಾಡಿದೆ.


2019ರಲ್ಲಿ ಪ್ರಧಾನಿ ಮೋದಿ ಅವರು ಡಿಸ್ಕವರಿ ಚಾನೆಲ್ ನ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ಸ್ ಅವರೊಂದಿಗೆ ತಾನು ಬಾಲ್ಯದಲ್ಲಿ ಮೊಸಳೆ ಮರಿಯನ್ನು ಹಿಡಿದು ಮನೆಗೆ ತಂದಿದ್ದೆ ಎಂದು ಹೇಳಿದ್ದರು.

Join Whatsapp
Exit mobile version