Home ಟಾಪ್ ಸುದ್ದಿಗಳು ಹೋರ್ಡಿಂಗ್ ಕುಸಿದು 16 ಮಂದಿ ಸಾವನ್ನಪ್ಪಿದ ಪ್ರದೇಶದಲ್ಲಿ ಮೋದಿ ರೋಡ್ ಶೋ: ಕಿಡಿಗಾರಿದ ಸಂಜಯ್ ರಾವತ್

ಹೋರ್ಡಿಂಗ್ ಕುಸಿದು 16 ಮಂದಿ ಸಾವನ್ನಪ್ಪಿದ ಪ್ರದೇಶದಲ್ಲಿ ಮೋದಿ ರೋಡ್ ಶೋ: ಕಿಡಿಗಾರಿದ ಸಂಜಯ್ ರಾವತ್

ಮುಂಬೈ: ಹೋರ್ಡಿಂಗ್ ಕುಸಿದು 16 ಮಂದಿ ಸಾವನ್ನಪ್ಪಿದ ಪ್ರದೇಶದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿರುವುದು ಅಮಾನವೀಯ ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಕಿಡಿಗಾರಿದ್ದಾರೆ.

ಒಬ್ಬ ವ್ಯಕ್ತಿಯ ಪ್ರಚಾರಕ್ಕಾಗಿ ರಸ್ತೆಗಳನ್ನು ಮುಚ್ಚಿ ಜನರಿಗೆ ಅನಾನುಕೂಲತೆ ಉಂಟುಮಾಡುವ ಇಂತಹ ಘಟನೆ ಎಂದಿಗೂ ನಡೆದಿಲ್ಲ. ಹೋರ್ಡಿಂಗ್ ಕುಸಿತು 16 ಜನ ಸಾವನ್ನಪ್ಪಿದ ಸ್ಥಳದಲ್ಲೇ ರೋಡ್‌ಶೋ ನಡೆಸಿರುವುದು ಅಮಾನವೀಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಾಟ್‌ಕೋಪರ್ ಪಶ್ಚಿಮದಿಂದ ಘಾಟ್‌ಕೋಪರ್ ಪೂರ್ವಕ್ಕೆ ಪ್ರಧಾನಿ ಮೋದಿಯವರ ರೋಡ್‌ಶೋ ನಿಮಿತ್ತ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ರಸ್ತೆಗಳು ಮತ್ತು ಮೆಟ್ರೋ ರೈಲು ಸೇವೆಗಳನ್ನು ಬಂದ್ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಘಾಟ್‌ಕೋಪರ್‌ನ ಛೇಡಾ ನಗರ ಪ್ರದೇಶದಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ 120 x 120 ಅಡಿಗಳ ಬೃಹತ್ ಹೋರ್ಡಿಂಗ್ ಕುಸಿದು 16 ಜನರು ಸಾವನ್ನಪ್ಪಿ ಮತ್ತು 75 ಮಂದಿ ಗಾಯಗೊಂಡಿದ್ದರು.

Join Whatsapp
Exit mobile version