Home ಟಾಪ್ ಸುದ್ದಿಗಳು ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದ ಮೋದಿಯೇ ಗ್ಯಾರಂಟಿಗಳ ಭರವಸೆ ನೀಡುತ್ತಿದ್ದಾರೆ: ಸಿದ್ದರಾಮಯ್ಯ

ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದ ಮೋದಿಯೇ ಗ್ಯಾರಂಟಿಗಳ ಭರವಸೆ ನೀಡುತ್ತಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ರಾಜಸ್ಥಾನದಲ್ಲಿ ಮೋದಿ ಅವರು ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದು ಹೇಳಿದರು. ಆದರೆ ಈಗ ಮೋದಿ ಅವರೇ ಗ್ಯಾರಂಟಿ ಭರವಸೆ ನೀಡುತ್ತಿದ್ದಾರೆ, ರಾಜ್ಯದ ನಾಯಕರು ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತಿದ್ದಾರೆ. ಈಗ ದಿವಾಳಿ ಆಗಲ್ವ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ನಲ್ಲಿ ನಡೆದ 100 ಅಶ್ವಮೇಧ ಕ್ಲಾಸಿಕ್ ಬಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ನಾವು ಚುನಾವಣೆ ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆವು. ಜೂನ್ 11 ಕ್ಕೆ ಇದೇ ಜಾಗದಲ್ಲಿ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿ ಮಾಡಿದೆವು. ಅಲ್ಲಿಂದ ಇಲ್ಲಿಯವರೆಗೆ 146 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ಇಷ್ಟು ಜನ ಉಚಿತವಾಗಿ ಪ್ರಯಾಣ ಮಾಡ್ತಾರೆ ಅಂದರೆ ಅವರು ತೆಗೆದುಕೊಳ್ಳಬೇಕಾದ ಹಣ ಉಳಿತಾಯ ಆಗಿದೆ. ಕೋಟಿಗಟ್ಟಲೆ ಹಣ ಹೆಣ್ಣು ಮಕ್ಕಳಿಗೆ ಉಳಿತಾಯವಾಗಿದೆ. ಈ ಉಳಿತಾಯದ ಹಣ ಬೇರೆಯದಕ್ಕೆ ಹೆಣ್ಣುಮಕ್ಕಳು ಖರ್ಚು ಮಾಡಿದ್ದಾರೆ. ನಾವು ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುತ್ತೇವೆ ಎಂದು ಹೇಳಿದೆವು. ಎಲ್ಲಾ ಜಾತಿ, ಧರ್ಮದ, ಪಕ್ಷದ ಬಡವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇವೆ ಎಂದರು.

ಹಿಂದೆ ಯಾವುದಾದರೂ ಸರ್ಕಾರ ಈ ಕೆಲಸ ಮಾಡಿತ್ತಾ? 1.17 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಕೊಡುವ ಯೋಜನೆ ಹಿಂದೆ ಯಾರಿಗಾದ್ರು ಇತ್ತಾ? ಮಹಿಳಾ ಸಬಲೀಕರಣ ಆಗಿಲ್ಲ. ಹೀಗಾಗಿ ನೀವು ಯಾರಿಗೆ ಸಪೋರ್ಟ್ ಮಾಡಬೇಕು? ಅಂತ ಪರೋಕ್ಷವಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಬೇಕು ಎಂದರು.

Join Whatsapp
Exit mobile version