Home ಟಾಪ್ ಸುದ್ದಿಗಳು ಮೋದಿ ಸ್ಟೇಟ್ಸ್’ಮನ್ ಅಲ್ಲ, ಸೇಲ್ಸ್’ಮನ್: ಬಿ.ಕೆ. ಹರಿಪ್ರಸಾದ್

ಮೋದಿ ಸ್ಟೇಟ್ಸ್’ಮನ್ ಅಲ್ಲ, ಸೇಲ್ಸ್’ಮನ್: ಬಿ.ಕೆ. ಹರಿಪ್ರಸಾದ್

ಬೀದರ್: ಪ್ರಧಾನಿ ನರೇಂದ್ರ ಮೋದಿಯವರು ಸ್ಟೇಟ್ಸ್ ಮನ್ ಅಲ್ಲ, ಅವರೊಬ್ಬ ಸೇಲ್ಸ್ ಮನ್ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ರಾಜ್ಯದ ಹಲವೆಡೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಮೀನು, ಮುಸಲ್ಮಾನ, ಪಾಕಿಸ್ತಾನ ಇದನ್ನು ಮಾತಾಡುತ್ತಿದ್ದಾರೆ. ನೆಹರೂ ಅವರಿಂದ ಮನಮೋಹನ್ ಸಿಂಗ್ ವರೆಗೆ ಪ್ರಧಾನಿಗಳಾದವರು ರಾಜಕೀಯ ಮುತ್ಸದ್ಧಿಗಳಾಗಿದ್ದರು. ರಾಜಕಾರಣದ ಮೇಲೆದ್ದು ಜಾತಿ, ಧರ್ಮ, ಭಾಷೆ ಮೀರಿ ರಾಷ್ಟ್ರದ ಹಿತದೃಷ್ಟಿಯಿಂದ ಮಾತಾಡುತ್ತಿದ್ದರು. ಆದರೆ, ಮೋದಿ ಹತ್ತು ವರ್ಷಗಳಲ್ಲಿ ಸ್ಟೇಟ್ಸ್ ಮನ್ ಶಿಪ್ ತೋರಿಸಿಲ್ಲ. ಸೇಲ್ಸ್ ಮನ್ ಶಿಪ್ ಎಂಬುದನ್ನು ತೋರಿಸಿದ್ದಾರೆ ಎಂದು ಟೀಕಿಸಿದರು.


ಮೋದಿ ಗ್ಯಾರಂಟಿ ಚೀನಾ ವಸ್ತುಗಳಿಗೆ ಇರುವ ವಾರಂಟಿ ಇದ್ದಂತೆ. ಚೀನಾ ವಸ್ತುಗಳಿಗೆ ಇರುವ ಗ್ಯಾರಂಟಿ, ಮೋದಿ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ನಮ್ಮ ಗ್ಯಾರಂಟಿಗಳಿಗೆ ವಾರಂಟಿ ಇದೆ. ನಾವು ಹೇಳಿದಂತೆ ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.

Join Whatsapp
Exit mobile version