Home ಟಾಪ್ ಸುದ್ದಿಗಳು ಮೋದಿ ರಾಕ್ಷಸನಿದ್ದಂತೆ, ಪುನಃ ಗೆದ್ದರೆ ಸರ್ವಾಧಿಕಾರಿ: ಮುಖ್ಯಮಂತ್ರಿ ಚಂದ್ರು

ಮೋದಿ ರಾಕ್ಷಸನಿದ್ದಂತೆ, ಪುನಃ ಗೆದ್ದರೆ ಸರ್ವಾಧಿಕಾರಿ: ಮುಖ್ಯಮಂತ್ರಿ ಚಂದ್ರು

ಬೀದರ್: ನರೇಂದ್ರ ಮೋದಿ ರಾಕ್ಷಸನಿದ್ದಂತೆ. ಈ ಸಲದ ಚುನಾವಣೆಯಲ್ಲಿ ಪುನಃ ಗೆದ್ದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಗಳೇ ನಡೆಯುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು

ಮೋದಿಯವರೇ 75 ವರ್ಷಕ್ಕೆ ರಾಜಕೀಯದಿಂದ ನಿವೃತ್ತರಾಗಬೇಕೆಂಬ ನಿಯಮ ಬಿಜೆಪಿಯಲ್ಲಿ ಜಾರಿಗೆ ತಂದಿದ್ದಾರೆ. ಅದರ ಪ್ರಕಾರ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಮನೆಯಲ್ಲಿ ಕೂರಿಸಿದ್ದಾರೆ. ಈ ನಿಯಮ ಅವರಿಗೂ ಅನ್ವಯಿಸುತ್ತದೆ. ಆದರೆ, ಕೇಂದ್ರ ಗೃಹಸಚಿವ ಅಮಿತ್ ಶಾ ಅದಕ್ಕೆ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ನರೇಂದ್ರ ಮೋದಿ ರಾಕ್ಷಸನಿದ್ದಂತೆ. ಈ ಸಲದ ಚುನಾವಣೆಯಲ್ಲಿ ಪುನಃ ಗೆದ್ದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಗಳೇ ನಡೆಯುವುದಿಲ್ಲ. ಇ.ಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದ್ದಾರೆ. ಚುನಾವಣಾ ಬಾಂಡ್ ಗಳ ಮೂಲಕ ಹಾಡಹಗಲೇ ದರೋಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾನ, ಮಾರ್ಯದೆ ಇಲ್ಲ. ಅಧಿಕಾರಕ್ಕಾಗಿ ಯಾರನ್ನಾದರೂ ಸಾಯಿಸುವ ನರಹಂತಕರು ಬಿಜೆಪಿಯವರು. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ವಾಮ ಮಾರ್ಗ ಹಿಡಿದಿದ್ದಾರೆ’ ಎಂದು ಆರೋಪಿಸಿದರು.

Join Whatsapp
Exit mobile version