ಕಲಬುರಗಿ: ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಏಕೆ ಬರುತ್ತಾರೆ ಎಂಬುದು ಅಸಮರ್ಥ ಬಿಜೆಪಿ ನಾಯಕರಿಗೆ ತಿಳಿದಿಲ್ಲ. ಬಿಜೆಪಿ ರಾಜ್ಯ ನಾಯಕರು ಅಸಮರ್ಥ ಎಂಬುದು ಮೋದಿಗೂ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕಾರ್ಯ ವೈಖರಿ ಮುಚ್ಚಿ ಹಾಕಲು ಪದೇ ಪದೇ ನನ್ನ ಹೆಸರು ಜಪಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ನಾನೇ ಮನೆ ದೇವರಾಗಿದ್ದು, ದಿನಕ್ಕೆ ಒಂದೆರಡು ಬಾರಿ ನನ್ನ ಹೆಸರು ಹೇಳದಿದ್ದರೆ ಅವರಿಗೆ ನಿದ್ರೆ ಬರಲ್ಲ, ತಿಂದಿದ್ದು ಕರಗಲ್ಲ. ರಾಜ್ಯದ 25 ಬಿಜೆಪಿಯ ಸಂಸದರನ್ನು ಏನು ತಂದಿದ್ದಾರೆ? ಬರ ಪರಿಹಾರ, ದೊಡ್ಡ ಯೋಜನೆಗಳು ಬರಲಿಲ್ಲ. ನರೇಗಾ ಕೂಲಿಯ ದಿನಗಳು ಹೆಚ್ಚಳ ಮಾಡಲಿಲ್ಲ. ಅಯೋಗ್ಯ, ಅಸಮರ್ಥ ಪದಗಳ ಎಲ್ಲ ಸಮನಾರ್ಥಕ ಪದಗಳು ಬಿಜೆಪಿ ರಾಜ್ಯ ನಾಯಕರಿಗೆ ಸರಿಹೊಂದುತ್ತವೆ’ ಎಂದು ವ್ಯಂಗ್ಯವಾಡಿದರು.