Home ಟಾಪ್ ಸುದ್ದಿಗಳು ಮೋದಿ ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರಲ್ಲ, ಆಗಿದೆಯಾ: ಪರಮೇಶ್ವರ್ ಪ್ರಶ್ನೆ

ಮೋದಿ ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರಲ್ಲ, ಆಗಿದೆಯಾ: ಪರಮೇಶ್ವರ್ ಪ್ರಶ್ನೆ

ಬೆಂಗಳೂರು: ಪ್ರಧಾನಿ ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರು. ಆದಾಯ ದ್ವಿಗುಣ ಆಗಿದೆಯಾ? ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ? ಪ್ರಧಾನಿಗಳ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು ಗೃಹ ಸಚಿವ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮೋದಿ ಟೀಕಿಸಿದ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮೋದಿಯವರು ಈ ದೇಶದ ಪ್ರಧಾನಿ. ಜನ ಪ್ರಧಾನಿಯವರ ಮಾತನ್ನು ಗಮನಿಸುತ್ತಿರುತ್ತಾರೆ. ಪ್ರಧಾನಿ ಆಡುವ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು. ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರು. ಆದಾಯ ದ್ವಿಗುಣ ಆಗಿದೆಯಾ? ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ? ಕಳೆದ ಸಲ ಮಹಾರಾಷ್ಟ್ರದಲ್ಲಿ ಏನೆಲ್ಲ ಭರವಸೆ ಕೊಟ್ಟಿದ್ದರೂ, ಅನುಷ್ಠಾನ ಮಾಡಿದ್ದಾರಾ? ಟೀಕೆ, ಅಭಿಪ್ರಾಯ ತಿಳಿಸುವುದು ಅವರ ಹಕ್ಕು, ನಾವು ಪ್ರಶ್ನೆ ಮಾಡಲ್ಲ. ಆದರೆ ಬಿಜೆಪಿಯಲ್ಲಿ ಬೇರೆಯವರು ಟೀಕೆ ಮಾಡಿದರೆ ಅದು ಬೇರೆ. ಪ್ರಧಾನಿಯವರು ಈ ರೀತಿ ಟೀಕೆ ಮಾಡುವುದು ಔಚಿತ್ಯವಲ್ಲ ಎಂದು ಟಕ್ಕರ್ ನೀಡಿದ್ದಾರೆ.

ನಾವು ಚುನಾವಣೆ ವೇಳೆ ಗ್ಯಾರಂಟಿಗಳ ಬಗ್ಗೆ ಮಾತು ಕೊಟ್ಟಿದ್ದೆವು, ಪ್ರಣಾಳಿಕೆಯಲ್ಲೂ ತಿಳಿಸಿದ್ದೆವು. ಭರವಸೆ ಈಡೇರಿಸಿರುವುದು ನಮ್ಮ ಬದ್ಧತೆ ತೋರಿಸುತ್ತದೆ. ನಮ್ಮ ಪ್ರಣಾಳಿಕೆ ತಯಾರು ಮಾಡುವ ಜವಾಬ್ದಾರಿ ನನಗೆ, ಪ್ರೊ.ರಾಧಾಕೃಷ್ಟ, ಮಧು ಬಂಗಾರಪ್ಪ ಅವರಿಗೆ ಕೊಟ್ಟಿದ್ದರು. ನಾವು 3 ಜನ ಸೇರಿ ತಯಾರು ಮಾಡಿದ್ದೆವು. ಐದು ಗ್ಯಾರಂಟಿಗಳನ್ನು ಕೂಡಾ ನಾವು ನಮ್ಮ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ, ಇದರ ಸಾಧಕ ಬಾಧಕಗಳನ್ನು, ಆರ್ಥಿಕ ಹೊರೆಯನ್ನು ಚರ್ಚೆ ಮಾಡಿ ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದೆವು ಎಂದರು.

Join Whatsapp
Exit mobile version