Home ಟಾಪ್ ಸುದ್ದಿಗಳು ನೀತಿ ಸಂಹಿತೆ ಜಾರಿ ಹಿನ್ನೆಲೆ: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ ಸಚಿವರು

ನೀತಿ ಸಂಹಿತೆ ಜಾರಿ ಹಿನ್ನೆಲೆ: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ ಸಚಿವರು

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ತಕ್ಷಣದಿಂದ ನೀತಿ ಸಂಹಿತೆ ಜಾರಿಯಾಗಿರುವುದರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಸರ್ಕಾರಿ ಕಾರನ್ನು ಬಿಟ್ಟು ತಮ್ಮ ಖಾಸಗಿ ವಾಹನದಲ್ಲಿ ತೆರಳಿದ್ದಾರೆ.


ವಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೆ ನೀಡಿದ್ಧ ಫಾರ್ಚ್ಯೂನರ್ ಸರ್ಕಾರಿ ಕಾರನ್ನು ಅಧಿಕಾರಿಗಳು ವಾಪಸ್ ಪಡೆದಿದ್ದಾರೆ. ಸರ್ಕಾರಿ ಕಾರಿನಲ್ಲಿದ್ದ ಸೂಟ್ ಕೇಸ್ ಸೇರಿದಂತೆ ಇತರ ವಸ್ತುಗಳು ಖಾಸಗಿ ಕಾರಿಗೆ ಸಿದ್ದರಾಮಯ್ಯರ ಆಪ್ತರು ಬೇರೆ ಕಾರಿಗೆ ವರ್ಗಾಯಿಸಿಕೊಂಡರು. ಮೈಸೂರಿನ ರಾಮಕೃಷ್ಣನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವಾಗಲೇ ಇತ್ತ ಸರ್ಕಾರಿ ಕಾರನ್ನು ಸರ್ಕಾರಿ ಅಧಿಕಾರಿಗಳು ವಾಪಸ್ ಪಡೆದುಕೊಂಡಿದ್ದಾರೆ.


ಅದೇ ರೀತಿ ಸಚಿವ ಎಂಟಿಬಿ ನಾಗರಾಜ್ ಸರ್ಕಾರಿ ಕಾರನ್ನು ಬಿಟ್ಟು ತಮ್ಮ ಖಾಸಗಿ ವಾಹನದಲ್ಲೇ ತೆರಳಿದರು. ಹೊಸಕೋಟೆ ತಾಲ್ಲೂಕಿನ ನಂದಗುಡಿ ಸಿಸಿರಸ್ತೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಖಾಸಗಿ ವಾಹನದಲ್ಲಿ ತೆರಳಿದರು.


ಅದೇ ರೀತಿ ಸಚಿವರಾದ ವಿ. ಸೋಮಣ್ಣ ಮತ್ತು ಮುನಿರತ್ನ ಕೂಡ ಮಾರ್ಗ ಮಧ್ಯೆ ಖಾಸಗಿ ವಾಹನಕ್ಕೆ ಬದಲಾದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಂಸದ ಬಿ ವೈ ರಾಘವೇಂದ್ರ ಮತ್ತು ಎಂಎಲ್ ಸಿ ರುದ್ರೇಗೌಡ ಸಹ ತಮ್ಮ ಖಾಸಗಿ ವಾಹನದಲ್ಲಿ ತೆರಳಿದರು.

Join Whatsapp
Exit mobile version