Home ಕರಾವಳಿ ಮಂಗಳೂರು ವಾಹನ ಸವಾರರೇ ಎಚ್ಚರ ! ಇಂದು ನಿಮ್ಮ ವಾಹನ ಜಪ್ತಿಯಾಗಲಿದೆ

ಮಂಗಳೂರು ವಾಹನ ಸವಾರರೇ ಎಚ್ಚರ ! ಇಂದು ನಿಮ್ಮ ವಾಹನ ಜಪ್ತಿಯಾಗಲಿದೆ

ಮಂಗಳೂರು : ಒಂದು ವಾರಗಳ ಕಾಲ ಮಂಗಳೂರು ಪೊಲೀಸರು ಕೈಗೊಂಡಿರುವ ಟ್ರಾಫಿಕ್ ಡ್ರೈವ್ ತಪಾಸಣೆಯ ಹಿನ್ನೆಲೆಯಲ್ಲಿ ಪ್ರತಿದಿನ ಒಂದೊಂದು ಆದ್ಯತೆಯ ಅನುಸಾರ ಕಾರ್ಯಾಚರಣೆ ನಡೆಯಲಿದೆ.

ಇಂದು (ಸೆ.30) ಇನ್ಸುರೆನ್ಸ್ (ವಿಮೆ) ತಪಾಸಣೆ ನಡೆಯಲಿದ್ದು ವಾಹನಗಳ ವಿಮೆಯನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ವಿಮೆ ಇಲ್ಲದಿದ್ದರೆ ಅಥವಾ ವಿಮೆ ಅವಧಿ ಮುಗಿದಿದ್ದರೆ ವಾಹನ ಜಪ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಾಹನಗಳಿಗೆ ವಿಮೆ ಇಲ್ಲದಿದ್ದರೆ ಅಥವಾ ವಿಮೆ ಅವಧಿ ಮುಗಿದಿದ್ದರೆ ದ್ವಿಚಕ್ರ/ತ್ರಿಚಕ್ರ ವಾಹನಕ್ಕೆ ದಂಡ 1000 ರೂ, ಲಘು ವಾಹನಕ್ಕೆ 2000ರೂ, ಭಾರೀ ವಾಹನಗಳಿಗೆ 4000 ರೂ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Join Whatsapp
Exit mobile version