Home ಟಾಪ್ ಸುದ್ದಿಗಳು ಆನ್​​ ಲೈನ್​ ಮೂಲಕ ಎಂಎಲ್’ಸಿ​ ವಿಶ್ವನಾಥ್ ಪುತ್ರನಿಗೆ 1 ಲಕ್ಷಕ್ಕೂ ಅಧಿಕ ಹಣ ವಂಚನೆ

ಆನ್​​ ಲೈನ್​ ಮೂಲಕ ಎಂಎಲ್’ಸಿ​ ವಿಶ್ವನಾಥ್ ಪುತ್ರನಿಗೆ 1 ಲಕ್ಷಕ್ಕೂ ಅಧಿಕ ಹಣ ವಂಚನೆ

ಮೈಸೂರು: ಆನ್‌ ಲೈನ್ ವಂಚನೆಯ ಜಾಲಕ್ಕೆ ಎಂಎಲ್‌ ಸಿ ಎಚ್ ವಿಶ್ವನಾಥ್ ಪುತ್ರ ಅಮಿತ್ ಬಿದ್ದು, ಬರೊಬ್ಬರಿ 1.99 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.

ಘಟನೆ ಬಳಿಕ ಕೂಡಲೇ ಸೈಬರ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಅವರು ಹಣ ಡ್ರಾ ಮಾಡಲು ಎಟಿಎಂಗೆ ಹೋಗಿದ್ದಾರೆ. ಈ ವೇಳೆ ಹಣ ಬಾರದ ಹಿನ್ನೆಲೆ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ನಂತರ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಬ್ಯಾಂಕ್ ಖಾತೆ ಬಗ್ಗೆ ವಿವರ ಪಡೆದು, ಅವರ ಖಾತೆಯಿಂದ 1.99 ಲಕ್ಷ ಹಣವನ್ನ ಲಪಟಾಯಿಸಿದ್ದಾನೆ.

Join Whatsapp
Exit mobile version