ಮಸೀದಿ, ಮಂದಿರ, ಚರ್ಚ್ ಗಳ ಧ್ವನಿವರ್ಧಕ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ ಶಾಸಕ ಜಮೀರ್ ಅಹ್ಮದ್

Prasthutha|

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸ್ವತಃ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಪರವಾನಗಿ ಕೊಡಿಸಿದ ಶಾಸಕ ಜಮೀರ್ ಅಹ್ಮದ್
ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡಲು, 450 ರೂಪಾಯಿ ಶುಲ್ಕ ಪಾವತಿಯೊಂದಿಗೆ ಹೊಸ ನಮೂನೆಯ ಅರ್ಜಿಯನ್ನು ಸಲ್ಲಿಸಿ ಪರವಾನಗಿ ಪಡೆಯುವಂತೆ ಈ ತಿಂಗಳು ದಿನಾಂಕ 3 ರಂದು ಸರ್ಕಾರವು ಸೂಚಿಸಿತ್ತು. ಆ ಪ್ರಕಾರ ಇಂದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಸೀದಿಗಳು, ಮಂದಿರಗಳು ಮತ್ತು ಚರ್ಚ್ ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳ ಪರವಾಗಿ, ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವ ಬಿ. ಜೆಡ್ ಜಮೀರ್ ಅಹ್ಮದ್ ಖಾನ್ ಅವರು, ಇಂದು ಮಸ್ಜಿದ್ ಇ ಸುಭಾನಿಯಾದಲ್ಲಿ ಪರವಾನಗಿ ನವೀಕರಣಕ್ಕಾಗಿ ಸ್ವತಃ 450 ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರವನ್ನು ಧಾರ್ಮಿಕ ಕೇಂದ್ರಗಳ ಮುಖಂಡರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಮುಖಂಡರು ಉಪಸ್ಥಿತರಿದ್ದರು.



Join Whatsapp