ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೊರೆದ ಮತ್ತೊರ್ವ ಶಾಸಕ | ಟಿಎಂಸಿ ಗೆ ಸೇರ್ಪಡೆ

Prasthutha|

ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ತೊರೆಯುತ್ತಿರುವ ಶಾಸಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇದೀಗ ಬಿಜೆಪಿಯಿಂದ ಮೂರನೇ ಶಾಸಕ ಬಿಸ್ವಜಿತ್ ದಾಸ್ ಅವರು ಪಕ್ಷ ತೊರೆದು ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಸೇರ್ಪಡೆಯಾಗಿದ್ದಾರೆ

- Advertisement -

ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದ ನಂತರ ಬಿಜೆಪಿ ತೊರೆದು ಟಿಎಂಸಿ ಸೇರಿದ ಮೂರನೇ ಶಾಸಕ ಬಿಸ್ವಜಿತ್ ದಾಸ್. ದಾಸ್ ಬಗ್ಡಾ ವಿಧಾನಸಭೆ ಕ್ಷೇತ್ರದಿಂದ ಚುನಾಯಿತರಾಗಿದ್ದರು.

ಟಿಎಂಸಿಯಿಂದ ಎರಡು ಬಾರಿ ಶಾಸಕರಾಗಿದ್ದ ದಾಸ್ ಅವರು ಈ ಹಿಂದೆ ಬಿಜೆಪಿಗೆ ಸೇರಿದ್ದರು. ಮುಕುಲ್ ರಾಯ್ ಬಿಜೆಪಿಗೆ ಸೇರಿದಾಗ ಅವರೊಂದಿಗೆ ದಾಸ್ ಕೂಡ ಬಿಜೆಪಿ ತೆಕ್ಕೆಗೆ ಸೇರಿದ್ದರು. ಬಂಗಾಂವ್(ಉತ್ತರ)ಕ್ಷೇತ್ರ ಸ್ಪರ್ಧಿಸಲು ಬಯಸಿದ್ದ ದಾಸ್ ಅವರನ್ನು ಬಾಗ್ಡಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಸೋಮವಾರವಷ್ಟೇ ಬಿಷ್ಣುಪುರ ಶಾಸಕ ತನ್ಮಯ್ ಘೋಷ್ ಬಿಜೆಪಿ ತ್ಯಜಿಸಿ ಟಿಎಂಸಿಯನ್ನು ಸೇರಿದ್ದರು.

Join Whatsapp