Home ಟಾಪ್ ಸುದ್ದಿಗಳು ಹೋರಾಟಗಳಲ್ಲಿ ಆಡಿದ ಮಾತೇ ಬೇರೆ, ಸ್ಥಾನಮಾನ ಸಿಕ್ಕಾಗಿನ ಮಾತೇ ಬೇರೆ: ಶಾಸಕ ಎನ್.ಮಹೇಶ್

ಹೋರಾಟಗಳಲ್ಲಿ ಆಡಿದ ಮಾತೇ ಬೇರೆ, ಸ್ಥಾನಮಾನ ಸಿಕ್ಕಾಗಿನ ಮಾತೇ ಬೇರೆ: ಶಾಸಕ ಎನ್.ಮಹೇಶ್

ಮೈಸೂರು: ಬಿಜೆಪಿ ಸೇರಿದ್ದಕ್ಕೆ ಬಿಎಸ್ ಪಿ ಕಾರ್ಯಕರ್ತರಿಂದ ಬರುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಶಾಸಕ ಎನ್.ಮಹೇಶ್, ಹೋರಾಟಗಳ ಸಂದರ್ಭದಲ್ಲಿ ಆಡಿದ ಮಾತೇ ಬೇರೆ, ಅಧಿಕಾರ-ಸ್ಥಾನಗಳಿಗೆ ಬಂದಾಗಿನ ಮಾತೇ ಬೇರೆ ಎಂದು ಹೇಳಿದ್ದಾರೆ.
ಅವತ್ತಿನ ರಾಜಕೀಯ ಸಂದರ್ಭಕ್ಕೆ ಹೇಳಿದ ಮಾತುಗಳನ್ನು ಇವತ್ತಿನ ನೆಲೆಯಲ್ಲಿ ನಿಂತು ನೋಡಬಾರದು. ಹೋರಾಟಗಳ ವೇಳೆ ಹೇಳಿದ ಮಾತೇ ಬೇರೆಯಾಗಿರುತ್ತದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.


ನನ್ನಿಂದ ಬಿ ಎಸ್ಪಿ ಗೆ ಮೋಸ ಆಗಿಲ್ಲ. ಆದರೆ ಬಿ ಎಸ್ ಪಿ ಪಕ್ಷದಿಂದ ನನಗೆ ಮೋಸವಾಗಿದೆ. ಬಿ ಎಸ್ ಪಿ ನನ್ನ ತಾಯಿ ಪಕ್ಷ ಎಂದು ಹೇಳಿದ್ದೆ. ಆದರೆ, ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು? ಮಗ ಅನಾಥನಾಗಿದ್ದ, ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡರು.


ನನ್ನನ್ನು ಟ್ರೋಲ್ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ಬಿಎಸ್ ಪಿ ಗೆಳೆಯರಿಗೆ ನಾನು ಹೇಳುವುದಿಷ್ಟು. ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನು ಬಿ ಎಸ್ ಪಿ ಪಕ್ಷ ಕಟ್ಟಲು ಬಳಸಿ. ನನ್ನನ್ನು ಟ್ರೋಲ್ ಮಾಡುತ್ತಿರುವವರಿಗೆ ಮಲೆ ಮಹದೇಶ್ವರ ಸ್ವಾಮಿ ಒಳೆಯದ್ದನ್ನೇ ಮಾಡಲಿ ಎಂದರು. ನಮ್ಮ ಮತ ಬ್ಯಾಂಕ್ ಯಾವುದು ನಮ್ಮನ್ನ ಬಿಟ್ಟು ಹೋಗಿಲ್ಲ. ನನಗೆ ಬಿಜೆಪಿ ಸೇರುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಕಾಂಗ್ರೆಸ್ನಲ್ಲಿ ಸ್ಥಾನಗಳು ಇಲ್ಲ. ಇದಿಲ್ಲದಿದ್ದರೆ ಚುನಾವಣಾ ರಾಜಕಾರಣ ಬಿಡಬೇಕಿತ್ತು. ಹೀಗಾಗಿ, ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು.

Join Whatsapp
Exit mobile version