ಅಸ್ಸಾಂ | ಮತ್ತೋರ್ವ ಶಾಸಕ ಕೋವಿಡ್‌ ನಿಂದ ಸಾವು

Prasthutha|

ಗುವಾಹತಿ : ಅಸ್ಸಾಂನಲ್ಲಿ ಮತ್ತೊಬ್ಬ ಶಾಸಕರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲಿನ ಪ್ರಾದೇಶಿಕ ಪಕ್ಷ ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌ (ಯುಪಿಪಿಎಲ್)‌ ಶಾಸಕ ಲೋಹೋ ರಾಮ್‌ ಬೋರೋ (೬೩) ಕೋವಿಡ್‌ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾರೆ.

ತುಮುಲ್‌ ಪುರ ವಿಧಾನಸಭಾ ಕ್ಷೇತ್ರದ ಶಾಸಕ ಲೋಹೋ ಕೋವಿಡ್‌ ಸೋಂಕು ದೃಢಪಟ್ಟಿದ್ದರಿಂದ ಗುವಾಹತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಅವರು ಮೃತರಾದರು.

- Advertisement -

ಕಳೆದ ಬುಧವಾರ ಗೊಸಾಯಿಗಾಂವ್‌ ವಿಧಾನಸಭಾ ಕ್ಷೇತ್ರದ ಶಾಸಕ ಮಜೇಂದ್ರ ನರ್ಜರಿ ಕೋವಿಡ್‌ ನಿಂದ ಮೃತಪಟ್ಟಿದ್ದರು. ಇವರು ಬೋಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ ಪಕ್ಷಕ್ಕೆ ಸೇರಿದವರು.

ಅಸ್ಸಾಂನಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, 80-90 ಮಂದಿ ಸಾವಿಗೀಡಾಗುತ್ತಿದ್ದಾರೆ. ಶುಕ್ರವಾರ 80 ಮಂದಿ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

- Advertisement -