Home ಟಾಪ್ ಸುದ್ದಿಗಳು ಮಿಜೋರಾಂ: ನಾಳೆ ಲಾಲ್ದುಹೋಮಾ ಸಿಎಂ ಆಗಿ ಪ್ರಮಾಣವಚನ

ಮಿಜೋರಾಂ: ನಾಳೆ ಲಾಲ್ದುಹೋಮಾ ಸಿಎಂ ಆಗಿ ಪ್ರಮಾಣವಚನ

ಐಜ್ವಾಲ್‌: ಝೋರಂ ಪೀಪಲ್ಸ್‌ ಮೂವ್‌ಮೆಂಟ್‌ನ (ZPM) ಸಾರಥಿ ಲಾಲ್ದುಹೋಮಾ ಮಿಜೋರಾಂನ ನೂತನ ಮುಖ್ಯಮಂತ್ರಿಯಾಗಿ ನಾಳೆ (ಶುಕ್ರವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಲಾಲ್ದುಹೋಮಾ ಜೊತೆ ಅವರ ಸಚಿವ ಸಂಪುಟದ ಇತರ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದ ರಾಜ್ಯಪಾಲ ಹರಿಬಾಬು ಕಂಭಂಪತಿ ಅವರನ್ನು ರಾಜಭವನದಲ್ಲಿ ನಿನ್ನೆ ಬೆಳಿಗ್ಗೆ ಭೇಟಿಯಾಗಿದ್ದ ಲಾಲ್ದುಹೋಮಾ, ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು. ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ.

ಪಕ್ಷದ ಸಲಹಾ ಮಂಡಳಿಯು ಲಾಲ್ದುಹೋಮಾ ಅವರನ್ನು ಇಂದು (ಗುರುವಾರ) ಭೇಟಿಯಾಗಿ ಹೊಸದಾಗಿ ರಚನೆಯಾಗಲಿರುವ ಸರ್ಕಾರದ ಸ್ವರೂಪ ಕುರಿತು ಚರ್ಚಿಸಲಿದೆ ಎಂದು ಪಕ್ಷದ ಮಾಧ್ಯಮ ಘಟಕದ ಪ್ರಧಾನ ಕಾರ್ಯದರ್ಶಿ ಎಡಿ ಜೊಸಾಂಗ್ಲಿಯಾನ ಕೋಲ್ನೆ ತಿಳಿಸಿದ್ದಾರೆ.

ಝೆಡ್‌ಪಿಎಂ ಶಾಸಕರ ಸಭೆಯು ಮಂಗಳವಾರ ನಡೆಯಿತು. ಲಾಲ್ದುಹೋಮಾ ಅವರನ್ನು ಝೆಡ್‌ಪಿಎಂ ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಲಾಯಿತು. ಕೆ. ಸಪ್‌ಡಾಂಗಾ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.

Join Whatsapp
Exit mobile version