ಮಿಕ್ಸಿ ಬಾಂಬ್​ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಅನೂಪ್‌ ಕುಮಾರ್​ ಬಂಧನ

Prasthutha|

ಹಾಸನ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಲು ಮಿಕ್ಸಿಯಲ್ಲಿ ಸ್ಫೋಟಕ‌ ವಸ್ತು ಇಟ್ಟು ಸ್ಫೋಟದ ಯತ್ನ ಮಾಡಿದ್ದ ಆರೋಪಿ ತಲಘಟ್ಟಪುರದ ಅನೂಪ್‌ ಕುಮಾರ್​’ನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತ ಆರೋಪಿ ಅನೂಪ್‌ ಕುಮಾರ್’ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಮಿಕ್ಸಿಯಲ್ಲಿ ಡೆಟೊನೆಟರ್‌ ಇಟ್ಟು ಸ್ಫೋಟ ಮಾಡುವುದು ಹೇಗೆ ಎಂದು ಅಂತರ್ಜಾಲದಲ್ಲಿ ಶೋಧ ನಡೆಸಿದ್ದ ಆರೋಪಿಯು ಮಿಕ್ಸಿಯಲ್ಲಿ ಡಿಟೊನೇಟರ್ ಪಿಕ್ಸ್ ಮಾಡಿದ್ದನು.

- Advertisement -

ರಾಮನಗರದ‌ ಕ್ವಾರಿಯೊಂದರಿಂದ ಎರಡು ಡೆಟೊನೆಟರ್‌ ತಂದಿದ್ದ ಆರೋಪಿ, ಬಾಂಬ್ ತಯಾರಿಕೆ ಬಗ್ಗೆ ಇಂಟರ್​’ನೆಟ್​’ನಲ್ಲಿ ಸರ್ಚ್ ಮಾಡಿ ನಂತರ ಮಿಕ್ಸಿಯಲ್ಲಿ ಡಿಟೊನೇಟರ್ ಫಿಕ್ಸ್ ಮಾಡಿದ್ದಾನೆ.

ಕಳೆದ ಡಿ.16 ರಂದು ಮಹಿಳೆಗೆ ಬೆಂಗಳೂರಿನಿಂದ ಪಾರ್ಸೆಲ್ ಕಳುಹಿಸಿದ್ದ ಆರೋಪಿ ಅನೂಪ್, ಡಿ.17 ರಿಂದಲೇ ಕೊರಿಯರ್ ಟ್ರ್ಯಾಕಿಂಗ್ ಐಡಿ ಮೂಲಕ ಡೆಲಿವರಿ ಆಗಿದಿಯಾ, ಮಿಕ್ಸಿ ಬ್ಲಾಸ್ಟ್ ಆಗಿರುವ ನ್ಯೂಸ್ ಬಂದಿದಿಯಾ ಎಂಬ ಬಗ್ಗೆಯೂ ಪರಿಶೀಲನೆ ಮಾಡಿದ್ದಾನೆ. ಡಿಸೆಂಬರ್ 17 ರಂದು ಮಹಿಳೆ ಮನೆ ತಲುಪಿದ್ದ ಕೊರಿಯರ್ ಡಿ.26 ರಂದು ಕುವೆಂಪುನಗರ ಎರಡನೇ ಹಂತ ಮುಖ್ಯ ರಸ್ತೆಯಲ್ಲಿ ಮಿಕ್ಸಿ ಸ್ಫೋಟ ಆಗಿತ್ತು. ಪ್ರಕರಣ ದಾಖಲಿಸಿಕೊಂಡು ಇದೀಗ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Join Whatsapp
Exit mobile version