Home ಟಾಪ್ ಸುದ್ದಿಗಳು ರಾಜಕೀಯ ಲಾಭಕ್ಕಾಗಿ ಯುವ ಸಮೂಹದ ದುರ್ಬಳಕೆ; ಕಾಂಗ್ರೆಸ್ ವಿರುದ್ಧ ನೆ.ಲ. ನರೇಂದ್ರ ಬಾಬು ವಾಗ್ದಾಳಿ

ರಾಜಕೀಯ ಲಾಭಕ್ಕಾಗಿ ಯುವ ಸಮೂಹದ ದುರ್ಬಳಕೆ; ಕಾಂಗ್ರೆಸ್ ವಿರುದ್ಧ ನೆ.ಲ. ನರೇಂದ್ರ ಬಾಬು ವಾಗ್ದಾಳಿ

ತೀರ್ಥಹಳ್ಳಿ : ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಹಿಂದುಳಿದ ವರ್ಗಗಳು ಅಲ್ಲೇ ಉಳಿದಿವೆ. ಇದಕ್ಕೆಲ್ಲಾ ಕಾರಣ ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು ಟೀಕಾಪ್ರಹಾರ ನಡೆಸಿದ್ದಾರೆ.


ಬಿಜೆಪಿ ಓಬಿಸಿ ಮೋರ್ಚಾದ ಜಿಲ್ಲಾ ಮಟ್ಟದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ.60 ಕ್ಕೂ ಹೆಚ್ಚು ಹಿಂದುಳಿದ ವರ್ಗದ ಜನರು ವಾಸಿಸುತ್ತಿದ್ದು, ಕೈಗಾರಿಕೆಗಳ ಕಾರಣದಿಂದಾಗಿ ತಮ್ಮ ಮೂಲ ವೃತ್ತಿಯನ್ನೇ ಕಳೆದುಕೊಂಡಿದ್ದಾರೆ. ಆದ್ದರಿಂದ ಹಿಂದುಳಿದ ವರ್ಗದ ಜನರು ಸಂಘಟನೆಯಿಂದ ಜಾಗೃತರಾಗಿ, ಶಕ್ತಿಯುತರಾಗಬೇಕಿದೆ ಎಂದು ಹೇಳಿದರು.


ಕೇಂದ್ರ ಸರ್ಕಾರದ ಸಂಪುಟದಲ್ಲಿ ಹಿಂದುಳಿದ ವರ್ಗದ 27 ಜನರಿಗೆ ಅವಕಾಶ ಕೊಟ್ಟಿದ್ದಾರೆ. ಚುನಾವಣೆಗಳಲ್ಲಿ ಓಬಿಸಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಓಬಿಸಿ ಮತದಾರರ ನೆರವಿಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವಲ್ಲಿ ಒಬಿಸಿ ಹೆಚ್ಚಿನ ಶ್ರಮ ವಹಿಸಲಿದೆ ಎಂದು ತಿಳಿಸಿದರು.


ಸರ್ಕಾರ 18 ವಯಸ್ಸಿನ ಯುವಕರಿಗೆ ಸೈನ್ಯಕ್ಕೆ ಸೇರಲು ಅವಕಾಶ ಮಾಡಿಕೊಟ್ಟಿದೆ. ಇಸ್ರೇಲ್ ನಂತಹ ದೇಶಗಳಲ್ಲಿ ಸೇನೆಯಲ್ಲಿ ಸೇವೆ ಮಾಡುವುದು ಕಡ್ಡಾಯವಾಗಿದೆ. ಆದರೆ, ನಮ್ಮ ದೇಶದಲ್ಲಿ ಸ್ವಯಂಪ್ರೇರಿತವಾಗಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಅಗಾಧವಾದ ಯುವ ಶಕ್ತಿ ನಮ್ಮ ದೇಶದಲ್ಲಿದ್ದು, ಕಾಂಗ್ರೆಸ್ ಅದನ್ನು ಕಾಂಗ್ರೆಸ್ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.

Join Whatsapp
Exit mobile version