Home ಟಾಪ್ ಸುದ್ದಿಗಳು ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ

ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ

ಹಾಸನ: ಕಳೆದ ಒಂದೂವರೆ ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ  ಅಸ್ಥಿಪಂಜರ ಆಕೆ ಧರಿಸಿದ್ದ ವಸ್ತ್ರದಜೊತೆಗೆ ಪತ್ತೆಯಾದ ಘಟನೆ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.

ನಾರಾಯಣಪುರದ ಮಹಿಳೆ ರತ್ನಮ್ಮ ಮೃತ ಮಹಿಳೆ.  ಕಳೆದ ಜುಲೈ 20ರಂದು ಹಸುಗಳನ್ನು ಮೇಯಿಸಲೆಂದು ಜಮೀನಿಗೆ ತೆರಳಿದ್ದ ರತ್ನಮ್ಮ ಸಂಜೆಯಾದರೂ ಮನೆಗೆ ಮರಳಲಿಲ್ಲ. ಫೋನ್ ಗೆ  ಕರೆ ಮಾಡಿದಾಗ ಜಮೀನಿನ ಬಳಿಯಿದ್ದ ಯಾರೋ ಫೋನ್ ರಿಸೀವ್ ಮಾಡಿ ಫೋನ್ ಜಮೀನಿನ ಬಳಿ ಬಿದ್ದಿತ್ತು ಎಂದು ತಿಳಿಸಿದ್ದರು.

ಕೂಡಲೇ ರತ್ನಮ್ಮ ಅವರ ಮಕ್ಕಳು ಶಾಂತಿಗ್ರಾಮ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ  ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ಮಧ್ಯೆ ರತ್ನಮ್ಮ ಅವರ ಸಂಬಂಧಿಕರು  ಊರಿನಲ್ಲಿ ನಡೆದ ಕೆಲ ಘಟನೆ ಆಧರಿಸಿ ರತ್ನಮ್ಮ ಕಣ್ಮರೆ ಹಿಂದೆ ಮಹೇಶ ಎಂಬಾತನ ಕೈವಾಡ ಇದೆ ಎಂಬುದಾಗಿ ಅನುಮಾನ ವ್ಯಕ್ತಪಡಿಸಿದ್ದರು.

ಪೊಲೀಸರು ಆತನನ್ನು ಕರೆತಂದು ವಿಚಾರಣೆ ಮಾಡಿದರೂ ರತ್ನಮ್ಮನ ಸುಳಿವು ಸಿಕ್ಕಿರಲಿಲ್ಲ. ಭಾರತೀಯ ಸೇನೆಯಲ್ಲಿರುವ  ರತ್ನಮ್ಮ ಅವರ ಮಗ  ರಾಕೇಶ್ ಊರಿಗೆ ಬಂದು ಒಂದು ತಿಂಗಳು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ, ಸೋಮವಾರ ನಾರಾಯಣಪುರದ ಜಗದೀಶ್ ಅವರು ತಮ್ಮ ಹೊಲದಲ್ಲಿ ಜೋಳ ಕಟಾವಿಗೆ ಹೋದಾಗ ಹೊಲದ ಮಧ್ಯೆ ಅಸ್ಥಿಪಂಜರ ಕಂಡುಬಂದಿದ್ದು ಸ್ಥಳದಲ್ಲಿ ರತ್ನಮ್ಮ ಧರಿಸಿದ್ದ ಸೀರೆ ಕೂಡ ಸಿಕ್ಕಿದೆ.

Join Whatsapp
Exit mobile version