Home ಟಾಪ್ ಸುದ್ದಿಗಳು ಬಿಲ್ಡರ್, ಕಟ್ಟಡ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

ಬಿಲ್ಡರ್, ಕಟ್ಟಡ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

ಬೆಂಗಳೂರು: ನಗರದಲ್ಲಿ ಬಿಲ್ಡರ್ ಹಾಗೂ ಕಟ್ಟಡದ ಮಾಲೀಕನ ಮೇಲೆ ದುಷ್ಕರ್ಮಿಗಳು ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆ ಕೆ.ಆರ್.ಪುರಂನ ಸೀಗೆಹಳ್ಳಿ ಬಳಿಯ ಹಾಸ್ಯಗಾರ್ಡನ್​ನಲ್ಲಿ ನಡೆದಿದೆ.

ಸೀಗೆಹಳ್ಳಿಯ ಹಾಸ್ಯಗಾರ್ಡನ್​ ನಲ್ಲಿ ಇಂದು ಮಧ್ಯಾಹ್ನ 3 ಗಂಟೆಯ ವೇಳೆ ಬಿಲ್ಡರ್ ಅಶೋಕ್, ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ಗುಂಡು ಹಾರಿಸ​ಲಾಗಿದೆ. ಬಿಲ್ಡರ್​ ಅಶೋಕ್​ ಮೇಲೆ ಒಂದು ಸುತ್ತು ಗುಂಡಿನ ದಾಳಿ ಮಾಡಿದ್ದು, ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ನಾಲ್ಕೈದು ಸುತ್ತು ಫೈರಿಂಗ್ ಮಾಡಿದ್ದಾರೆ.

ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಅಶೋಕ್, ಶಿವಾರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಂಧ್ರ ಪ್ರದೇಶದಿಂದ ಬಂದಿರುವ ಗ್ಯಾಂಗ್​ನಿಂದ ಕೃತ್ಯವೆಸಗಲಾಗಿದೆ ಎಂದು ಶಂಕಿಸಲಾಗಿದೆ. ರಸ್ತೆ ಬದಿ ನಿಂತಿದ್ದಾಗ ಏಕಾಏಕಿ ಬಂದು ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.

ಶಿವಾರೆಡ್ಡಿ ಆಂಧ್ರದ ಮದನಪಲ್ಲಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಎರಡು ಕೊಲೆಗಳು ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ. ಕೆ.ಆರ್ ಪುರಂ ಲಿಮಿಟ್ಸ್​ನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿಸುತ್ತಿದ್ದು, ಮಧ್ಯಾಹ್ನದ ವೇಳೆಗೆ ಕಾಮಗಾರಿ ವೀಕ್ಷಿಸಲು ತನ್ನ ಡ್ರೈವರ್ ಅಶೋಕ್ ರೆಡ್ಡಿ ಜೊತೆ ಹೋಗಿದ್ದ. ಈ ವೇಳೆ ನಾಲ್ಕು ಜನರ  ತಂಡ ಎರಡು ಬೈಕ್​ಗಳಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ.

Join Whatsapp
Exit mobile version