Home ಟಾಪ್ ಸುದ್ದಿಗಳು ನಟಿ ಜೊತೆ ಅನುಚಿತ ವರ್ತನೆ| ಕಾನೂನು ಕಾಲೇಜ್​ನಿಂದ ವಿದ್ಯಾರ್ಥಿ ಅಮಾನತು

ನಟಿ ಜೊತೆ ಅನುಚಿತ ವರ್ತನೆ| ಕಾನೂನು ಕಾಲೇಜ್​ನಿಂದ ವಿದ್ಯಾರ್ಥಿ ಅಮಾನತು

ಎರ್ನಾಕುಲಂ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿಯೊಬ್ಬನನ್ನು ಎರ್ನಾಕುಲಂ ಕಾನೂನು ಕಾಲೇಜು ಅಮಾನತುಗೊಳಿಸಿದೆ.

ವೇದಿಕೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನೊಂದಿಗೆ ನಡೆದುಕೊಂಡ ರೀತಿಗೆ ಸ್ವತಃ ನಟಿಯೇ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದರು.

ಸಮಾರಂಭದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ವೇದಿಕೆಯ ಮೇಲಿದ್ದ ನಟಿಯ ಬಳಿಗೆ ತೆರಳಿದ್ದಾನೆ. ಬಳಿಕ ನಟಿಯನ್ನು ಎದ್ದು ನಿಲ್ಲುವಂತೆ ಮನವಿ ಮಾಡಿದ್ದಾನೆ. ಈ ವೇಳೆ, ಎದ್ದು ನಿಂತ ನಟಿಯ ಭುಜದ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ್ದಾನೆ. ಇದರಿಂದ ನಟಿ ದೂರ ಸರಿದ್ದಿದ್ದರು. ಬಳಿಕ ಆ ವಿದ್ಯಾರ್ಥಿನಿಯನ್ನು ಅಮಾನತು ಮಾಡಲಾಗಿದೆ.

Join Whatsapp
Exit mobile version