ಪವಾಡಸದೃಶ ಘಟನೆ: 22 ಗಂಟೆಗಳ ಸ್ವ ಪರಿಶ್ರಮದ ಮೂಲಕ ಮಣ್ಣಿನಡಿಯಿಂದ ಹೊರಬಂದ ಕಾರ್ಮಿಕರು!

Prasthutha|

ರಾಂಚಿ: ಬೊಕೆರೊದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಕುಸಿತ ಸಂಭವಿಸಿ ನಾಲ್ವರು ಕಾರ್ಮಿಕರು ಭೂಮಿಯಡಿ ಸಿಲುಕಿಕೊಂಡಿದ್ದರು.ಅದಾಗಿ 22 ಗಂಟೆಗಳೇ ಕಳೆಯುತ್ತಿರಲು ಆ ನಾಲ್ಚರು ಬದುಕಿರುವ ಸಾಧ್ಯತೆಯನ್ನು ಯಾರೂ ಇಟ್ಟುಕೊಂಡಿರಲಿಲ್ಲ. ಆದರೆ ಭೂಮಿಯಡಿ ಸಿಲುಕಿಕೊಂಡಿದ್ದ 22 ಗಂಟೆಗಳ ನಂತರ ನಾಲ್ವರೂ ಪವಾಡಸದೃಶವಾಗಿ ಹೊರಬಂದಿದ್ದಾರೆ.

- Advertisement -

ಆದರೆ ಯಾವುದೇ ರಕ್ಷಣಾ ಕಾರ್ಯಾಚರಣೆಯಿಂದ ಅವರು ಜೀವಂತವಾಗಿ ಭೂಮಿಯಡಿಯಿಂದ ಮೇಲೆದ್ದು ಬಂದದಲ್ಲ, ಮಣ್ಣಿನಡಿ ಬಂಧಿಯಾಗಿ 22 ಗಂಟೆಗಳ ಸ್ವಪ್ರಯತ್ನದಿಂದ ಕೊನೆಗೂ ಅವರು ಹೊರಬಂದಿದ್ದಾರೆ. ಇದು ಆಶ್ಚರ್ಯದ ಘಟನೆಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಭೂಮಿಯಡಿ ಸಿಲುಕಿದ್ದ ನಾಲ್ವರೂ ಹತಾಶೆಯಾದರೂ ಪ್ರಯತ್ನ ಬಿಡಲಿಲ್ಲ. ತಮ್ಮ ಬಳಿಯಿದ್ದ ಉಪಕರಣ ಬಳಸಿ ಒಳಗಿನಿಂದಲೇ ಮಣ್ಣನ್ನು ಅಗೆಯುತ್ತಾ ಬಂದಿದ್ದಾರೆ. ಗಂಟೆಗಟ್ಟಲೆ ಪ್ರಯತ್ನಿಸಿದರೂ ಹೊರಬರಲಾಗದೇ ಹೋದಾಗ ಹತಾಶೆಯಿಂದ ಕೈಚೆಲ್ಲದೇ ಪ್ರಯತ್ನಿಸುತ್ತಾ ಬoದಿದ್ದಾರೆ. ಅದರ ಫಲವಾಗಿ ಅವರಿಂದು ಜೀವಂತವಾಗಿ ಮರಳಿದ್ದಾರೆ.

- Advertisement -

ಇದಕ್ಕೂ ಮುನ್ನ ಅವರ ರಕ್ಷಣೆ ಎನ್ ಡಿ ಆರ್ ಎಫ್ ತಂಡ ಧಾವಿಸಿತ್ತು. ಆದರೆ ಕಾರ್ಮಿಕರು ಗಣಿಯ ಯಾವ ಭಾಗದಲ್ಲಿದ್ದಾರೆ ಎನ್ನುವುದು ತಿಳಿಯದ ಕಾರಣ ರಕ್ಷಣಾ ತಂಡದ ಕಾರ್ಯಾಚರಣೆ ಫಲ ನೀಡಿರಲಿಲ್ಲ. ಭೂಮಿಯಡಿ ಸಿಲುಕಿಕೊಂಡಿದ್ದ ನಾಲ್ವರೂ ಅಕ್ರಮ ಗಣಿಗಾರಿಕೆ ಮಾಡಲು ಗಣಿಯೊಳಗೆ ಇಳಿದಿದ್ದರು ಎಂದು ತಿಳಿದುಬಂದಿದೆ. ಕೆಲಸ ಇಲ್ಲದ ಕಾರಣ ತಾವು ಈ ಕೆಲಸಕ್ಕೆ ಇಳಿದಿದ್ದಾಗಿ ನಾಲ್ವರಲ್ಲೊಬ್ಬರು ತಿಳಿಸಿದ್ದಾರೆ.

Join Whatsapp