ವಕ್ಫ್ ಕಾನೂನಿನ ತಿದ್ದುಪಡಿಯಿಂದ ಅಲ್ಪಸಂಖ್ಯಾತ ಬಡವರಿಗೆ ನ್ಯಾಯ ಸಿಗಲಿದೆ: ಬಿ.ವೈ.ರಾಘವೇಂದ್ರ

Prasthutha|

ಶಿವಮೊಗ್ಗ: ವಕ್ಫ್ ಬೋರ್ಡ್ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ಕೂಡ ಪ್ರಶ್ನೆ ಮಾಡುವ ಆಗಿಲ್ಲ ಎಂದು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಲಾಗಿತ್ತು. ಈಗ ವಕ್ಫ್ ಬೋರ್ಡ್ ಕಾನೂನಿನ ತಿದ್ದುಪಡಿಯಿಂದ ದೇಶದ ಅನೇಕ ಅಲ್ಪಸಂಖ್ಯಾತ ಬಡವರಿಗೆ ನ್ಯಾಯ ಸಿಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದ್ಧ ತಿದ್ದುಪಡಿಗೆ ಮತ್ತು ವಕ್ಫ್ ಬೋರ್ಡ್ ತೀರ್ಮಾನವನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನೆ ಮಾಡುವ ಅಧಿಕಾರ ಕಲ್ಪಿಸುವ ಸಂವಿಧಾನಬದ್ಧ ಬಿಲ್‍ನ್ನು ಸಂಸತ್‍ನಲ್ಲಿ ಮಂಡಿಸಿದ್ದು, ಇದಕ್ಕೆ ಸಕಾರಾತ್ಮಕ ಜಯ ಸಿಗಲಿದೆ. ಇದರಿಂದಾಗಿ ಮುಸ್ಲಿಮರಿಗೆ ಒಳಿತಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹಮ್ಮಿಕೊಂಡ ಪಾದಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ರಾಜ್ಯದ ಸರ್ಕಾರಿ ನೌಕರರು ನಿರ್ಭೀತಿಯಿಂದ ಕೆಲಸ ಮಾಡುವ ಮನಸ್ಥಿತಿಯಲ್ಲಿಲ್ಲ. ಅಧಿಕಾರಿಗಳಾದ ಪರಶುರಾಮ್ ಮತ್ತು ಚಂದ್ರಶೇಖರ್ ಆತ್ಮಹತ್ಯೆ ಇನ್ನೋರ್ವ ಅಧಿಕಾರಿ ಹೈಕೋರ್ಟ್‍ನಲ್ಲಿ ರಕ್ಷಣೆ ಕೋರಿರುವುದು, ಈ ಸರ್ಕಾರದ ಆಡಳಿತವನ್ನು ಬಯಲು ಮಾಡಿದೆ ಎಂದರು. ಮೂಡದಲ್ಲಿ 5 ಸಾವಿರ ಕೋಟಿ ರು. ಅವ್ಯವಹಾರ ಆಗಿದೆ ಎಂದು ಖಾಸಗಿ ದೂರು ದಾಖಲಾಗಿದೆ. ನಮಗೆ ಮುಖ್ಯಮಂತ್ರಿಗಳ ಬಗ್ಗೆ ಗೌರವವಿದೆ. ಅವರ ಮೇಲಿನ ಆರೋಪ ಮುಕ್ತ ಆಗುವವರೆಗೆ ಅವರು ರಾಜೀನಾಮೆ ನೀಡಲಿ, ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ.



Join Whatsapp
Exit mobile version