ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಅಲ್ಪ ಹೇಳಿಕೆ ನೀಡುವುದನ್ನು ಬಿಟ್ಟು, ಮೋಸದ ಜಾಲಕ್ಕೆ ಬಲಿಯಾಗಿ ತುಮಕೂರಿನಲ್ಲಿ ಅನ್ಯಾಯವಾಗಿ ಜೀವ ಕಳೆದುಕೊಂಡಿರುವ ಮೂವರು ಸಹೋದರರ ಕುಟುಂಬಕ್ಕೆ ನ್ಯಾಯ ಯ ದೊರಕಿಸಿ ಕೊಡಲಿ ಎಂದು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ಅಲ್ಪ ಹೇಳಿಕೆ ಬಿಟ್ಟು ಭೀಕರವಾಗಿ ಕೊಲೆಯಾದ ಮೂವರು ಕಳಕೊಂಡ ದುಡ್ಡಿನ ನಿಖರ ತನಿಖೆಯೊಂದಿಗೆ ಸರಕಾರದ ವತಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ತುಮಕೂರು ತ್ರಿವಳಿ ಕೊಲೆ ಪ್ರಕರಣದ ವಿಚಾರದಲ್ಲಿ ಎಸ್‌ಡಿಪಿಐ ಮುಖಂಡರು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಹೇಳಿಕೆ ನೀಡಿದ್ದಕ್ಕೆ ಎಸ್ಡಿಪಿಐ ನಾಯಕ ಹೀಗೆ ತಿರುಗೇಟು ನೀಡಿದ್ದಾರೆ.