Home ಟಾಪ್ ಸುದ್ದಿಗಳು ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಭರತ್ ಸೋನಿಯ ಮನೆ ಕೆಡವಲು ಪಾಲಿಕೆ ಆದೇಶ

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಭರತ್ ಸೋನಿಯ ಮನೆ ಕೆಡವಲು ಪಾಲಿಕೆ ಆದೇಶ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ನಾಳೆ ನೆಲಸಮ ಮಾಡಲಾಗುವುದು ಎಂದು ಉಜ್ಜಯಿನಿ ಮಹಾನಗರ ಪಾಲಿಕೆ ತಿಳಿಸಿದೆ.


15 ವರ್ಷದ ಬಾಲಕಿಯೊಬ್ಬಳು ಅರೆಬೆತ್ತಲೆಯಾಗಿ, ರಕ್ತಸ್ರಾವವಾಗುತ್ತಿರುವಾಗ ಜನರಲ್ಲಿ ಸಹಾಯಕ್ಕೆ ಅಂಗಲಾಚುತ್ತಿರುವ ವಿಡಿಯೊ ಕಳೆದ ವಾರ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಆರೋಪಿ ಭರತ್ ಸೋನಿ ಎಂಬ ಆಟೋ ರಿಕ್ಷಾ ಚಾಲಕನನ್ನು ಗುರುವಾರ ಬಂಧಿಸಲಾಗಿದೆ. ಸದ್ಯ ಭರತ್ ಜೈಲಿನಲ್ಲಿದ್ದು ವಿಚಾರಣೆಗಾಗಿ ಕಾಯುತ್ತಿದ್ದಾನೆ. ಈತನ ಕುಟುಂಬವು ಸರ್ಕಾರಿ ಭೂಮಿಯಲ್ಲಿರುವ ಮನೆಯಲ್ಲಿ ವರ್ಷಗಳಿಂದ ವಾಸಿಸುತ್ತಿದೆ ಎಂದು ಉಜ್ಜಯಿನಿ ಮಹಾನಗರ ಪಾಲಿಕೆ ತಿಳಿಸಿದೆ.

Join Whatsapp
Exit mobile version