ಸೆಲ್ಫೀಗಾಗಿ ರೈಲು ನಿಲ್ದಾಣದ ತೈಲ ಟ್ಯಾಂಕರ್ ಮೇಲೆ ಹತ್ತಿದ ಬಾಲಕನಿಗೆ ವಿದ್ಯುತ್ ಆಘಾತ !

Prasthutha|

ಜೋಕಟ್ಟೆ : ಸೆಲ್ಫಿ ತೆಗೆಯಲೆಂದು ಇಲ್ಲಿನ ಸ್ಥಳೀಯ ತೋಕೂರು ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದ್ದ ತೈಲ ಟ್ಯಾಂಕರ್ ಮೇಲೆ ಹತ್ತಿದ್ದ ಬಾಲಕನೋರ್ವನಿಗೆ ನಿಲ್ದಾಣದ ಓವರ್ ಹೆಡ್ ಹೈ ವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಗೊಂಡಿದೆ. ಬಾಲಕ 60 ಶೇಕಡಾ ತೀವ್ರ ತರದ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಾಲಕನನ್ನು ದೀಶಾನ್ (16) ಎಂದು ಗುರುತುಸಲಾಗಿದೆ.

- Advertisement -

ಗೆಳೆಯರೊಂದಿಗೆ ಆಟವಾಡುತ್ತಾ ರೈಲ್ವೇ ನಿಲ್ದಾಣ ತಲುಪಿದ್ದ ಬಾಲಕ ಸೆಲ್ಫೀ ತೆಗೆಯುವ ಸಲುವಾಗಿ ಅಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಮೇಲೆ ಹತ್ತಿದ್ದಾನೆ. ಈ ವೇಳೆ ಆತನಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡಿದೆ ಎನ್ನಲಾಗಿದೆ. ಸ್ಥಳೀಯರು ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Join Whatsapp