Home ಟಾಪ್ ಸುದ್ದಿಗಳು ಅನಿವಾರ್ಯತೆ ಬಂದರೆ ಲೋಕಸಭೆಗೆ ಸಚಿವರೂ ಸ್ಪರ್ಧೆ ಮಾಡಬೇಕಾಗುತ್ತದೆ: ಪರಮೇಶ್ವರ್

ಅನಿವಾರ್ಯತೆ ಬಂದರೆ ಲೋಕಸಭೆಗೆ ಸಚಿವರೂ ಸ್ಪರ್ಧೆ ಮಾಡಬೇಕಾಗುತ್ತದೆ: ಪರಮೇಶ್ವರ್

ಬೆಂಗಳೂರು: ಅನಿವಾರ್ಯತೆ ಬಂದರೆ ಸಚಿವರು ಸಹ ಸ್ಪರ್ಧೆ ಮಾಡಬೇಕಾಗುತ್ತದೆ ಅಂತ ಸುರ್ಜೇವಾಲ ತಿಳಿಸಿದ್ದಾರೆಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.


ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯ ಸಭೆಯಲ್ಲಿ ಆ ವಿಚಾರ ಚರ್ಚೆ ಆಗಿಲ್ಲ. ಆದರೆ ಸಚಿವರು ಸ್ಪರ್ಧೆ ಮಾಡೋ ಪರಿಸ್ಥಿತಿ ಬಂದರೆ ಸ್ಪರ್ಧಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಕಳೆದ ಬಾರಿ ಕೃಷ್ಟಭೈರೇಗೌಡ ಸ್ಪರ್ಧೆ ಉದಾಹರಣೆ ಕೊಟ್ಟು ಹೇಳಿದ್ದಾರೆ ಅನ್ನೋ ಮೂಲಕ ಸಚಿವರ ಸ್ಪರ್ಧೆಗೆ ಸಂದೇಶ ಬಂದಿದೆ ಅನ್ನೋ ಮಾಹಿತಿ ನೀಡಿದ್ದಾರೆ.

Join Whatsapp
Exit mobile version