Home ಟಾಪ್ ಸುದ್ದಿಗಳು ನೇಣುಬಿಗಿದ ಸ್ಥಿತಿಯಲ್ಲಿ ಶಿಕ್ಷಣ ಸಚಿವರ ಸೊಸೆಯ ಮೃತದೇಹ ಪತ್ತೆ !

ನೇಣುಬಿಗಿದ ಸ್ಥಿತಿಯಲ್ಲಿ ಶಿಕ್ಷಣ ಸಚಿವರ ಸೊಸೆಯ ಮೃತದೇಹ ಪತ್ತೆ !

ಭೋಪಾಲ್: ಮಧ್ಯಪ್ರದೇಶ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಸವಿತಾ ಅವರ ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


22 ವರ್ಷ ಪ್ರಾಯದ ಸವಿತಾ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಲಾಪಿಪಾಲ್ ತಹಸಿಲ್ ನ ಪೊಂಚನೇರ್ ಗ್ರಾಮದ ಅವರ ನಿವಾಸದಲ್ಲಿ ನಡೆದಿದೆ.


ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


ಕಳೆದ ಮೂರು ವರ್ಷಗಳ ಹಿಂದೆ ಇಂದರ್ ಸಿಂಗ್ ಪರ್ನಾರ್ ಅವರ ಪುತ್ರ ದೇವರಾಜ್ ಸಿಂಗ್ ಜೊತೆ ಸವಿತ ವಿವಾಹವಾಗಿದ್ದರು. ಘಟನೆಯ ವೇಳೆ ದೇವರಾಜ್ ಸಿಂಗ್ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಉಳಿದ ಸದಸ್ಯರು ಮನೆಯಲ್ಲೇ ಇರುವಾಗ ಈ ಘಟನೆ ನಡೆದಿದೆ.

Join Whatsapp
Exit mobile version