Home ಟಾಪ್ ಸುದ್ದಿಗಳು ಸಚಿವ ಸುಧಾಕರ್ ಒಬ್ಬ ಪೆದ್ದ, ಆರೆಸ್ಸೆಸ್ಸಿಗರ ಪ್ರೀತಿಗಳಿಸಲು ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ

ಸಚಿವ ಸುಧಾಕರ್ ಒಬ್ಬ ಪೆದ್ದ, ಆರೆಸ್ಸೆಸ್ಸಿಗರ ಪ್ರೀತಿಗಳಿಸಲು ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ‘ಸಚಿವ ಸುಧಾಕರ್ ಒಬ್ಬ ಪೆದ್ದ. ನಿನ್ನೆ ಮೊನ್ನೆ ಬಿಜೆಪಿ ಸೇರಿದ ಈತ ಆರೆಸ್ಸೆಸ್ಸಿಗರ ಪ್ರೀತಿಗಳಿಸಲು ಮೂಲ ಬಿಜೆಪಿಯವರಿಗಿಂತ ಭಯಾನಕ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಜಿ ರಿಪೋರ್ಟ್ ಓದಲು, ಅರ್ಥ ಮಾಡಿಕೊಳ್ಳಲು ಸುಧಾಕರ್ಗೆ ಬರುವುದಿಲ್ಲ. ಆತ ಮಾಡಿದ ಆರೋಪಕ್ಕೂ ಸಿಎಜಿ ವರದಿಯಲ್ಲಿ ಇರುವುದಕ್ಕೂ ಸಂಬಂಧವೇ ಇಲ್ಲ. ಬಿಜೆಪಿಯ ಆಲಿಬಾಬಾ ಮತ್ತು 40 ಕಳ್ಳರ ದಂಡನಾಯಕ ಆಗುವ ಹಠಕ್ಕೆ ಬಿದ್ದ ಸುಧಾಕರ್ನನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಫೂನ್ ಮಾಡುತ್ತಿದ್ದಾರೆ. ಬೇಕಂತಲೇ ಸುಧಾಕರ್ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ ಎಂದು ಹೇಳಿದರು.


‘ನಮ್ಮ ಪಕ್ಷದಿಂದ ರಾಜಕೀಯ ಜೀವನ ಪಡೆದ ಸುಧಾಕರ್, ದುಡ್ಡಿನ ಆಸೆಗೆ ಬಿದ್ದು ತಮ್ಮನ್ನು ಆಪರೇಷನ್ ಕಮಲಕ್ಕೆ ಮಾರಿಕೊಂಡರು. ಕಾಂಗ್ರೆಸ್ನಿಂದ ಸುಧಾಕರ್ಗೆ ಟಿಕೆಟ್ ಕೊಡುವಾಗ, ‘ಅವನೊಬ್ಬ ಬಿಗ್ ಫ್ರಾಡ್. ಅವನಿಗೆ ಟಿಕೆಟ್ ಕೊಡಬಾರದು’ ಎಂದು ಮೊಯ್ಲಿ ಹೇಳಿದ್ದನ್ನು ನೆನಪಿಸಿದರು.


‘ಬೆಂಗಳೂರಿನ ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರ ಆಗಿಲ್ಲ ಎಂದು ಕ್ಯಾಪ್ಟನ್ ದೊಡ್ಡಿಹಾಳ್ ಸಮಿತಿ ಕೊಟ್ಟಿದ್ದ ವರದಿಯನ್ನು ಯಡಿಯೂರಪ್ಪ ಸರ್ಕಾರವು ಅಂಗೀಕರಿಸಿದೆ. ಈ ವಿಚಾರ ತಿಳಿದುಕೊಳ್ಳದೆ ಸುಧಾಕರ್ ಮಣ್ಣು ತಿನ್ನುತ್ತಿದ್ದರಾ? ಇಲ್ಲ ಏನು ತಿನ್ನುತ್ತಿದ್ದರು?’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version