Home ಟಾಪ್ ಸುದ್ದಿಗಳು ಸಮಸ್ಯೆ ಹೇಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ಸಚಿವ ಸೋಮಣ್ಣ !

ಸಮಸ್ಯೆ ಹೇಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ಸಚಿವ ಸೋಮಣ್ಣ !

ಗುಂಡ್ಲುಪೇಟೆ: ಸಮಸ್ಯೆ ಹೇಳಲು ಬಂದ ಮಹಿಳೆಯೊಬ್ಬರಿಗೆ ವಸತಿ ಮೂಲಸೌಕರ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕೆನ್ನೆಗೆ ಬಾರಿಸಿದ ಘಟನೆ ತಾಲ್ಲೂಕಿನ ಹಂಗಳದಲ್ಲಿ ನಡೆದ ಗ್ರಾಮೀಣ ಪ್ರದೇಶಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ನಡೆದಿದೆ.


ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಿಲ್ಲ. ನಿವೇಶನ ಇದ್ದವರಿಗೇ ಮತ್ತೆ ಕೊಡಲಾಗಿದೆ. ನಮಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಮುಖಂಡ ನಂಜಪ್ಪ ಅವರು ಹೇಳಿದವರಿಗೆ ನಿವೇಶನ ನೀಡಲಾಗಿದೆ ಎಂದು ಆರೋಪಿಸಿ ಕೆಲವು ಮಹಿಳೆಯರು ಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.


ಈ ಸಂದರ್ಭದಲ್ಲಿ ಕೆಂಪಮ್ಮ ಎಂಬ ಮಹಿಳೆ ಸಚಿವರ ಬಳಿಗೆ ಹೋಗಿ ಸಮಸ್ಯೆ ಹೇಳಲು ಹೊರಟಾಗ ಸೋಮಣ್ಣ ಕೆನ್ನೆಗೆ ಬಾರಿಸಿದ್ದಾರೆ.

Join Whatsapp
Exit mobile version