ಕಾರಟಗಿ: ಸಚಿವ ಶಿವರಾಜ್ ತಂಗಡಗಿ ಮೂರನೇ ಬಾರಿ ಹನುಮ ಮಾಲೆ ಧರಿಸಿದ್ದು, ಹನುಮ ಜಯಂತಿ ದಿನ (ಏ. 23) ಅಂಜನಾದ್ರಿಯ ಆಂಜನೇಯ ಸನ್ನಿಧಿಯಲ್ಲಿ ಇರಮುಡಿ ಸಮರ್ಪಿಸಿ ಮಾಲೆಯನ್ನು ವಿರಮಣ ಮಾಡಲಾಗುವುದು ಎಂದು ಹೇಳಿದ್ದಾರೆ.
ನಾನು ಆಂಜನೇಯಸ್ವಾಮಿಯ ಭಕ್ತನಾಗಿದ್ದರಿಂದ 3ನೇ ಬಾರಿ ಮಾಲೆ ಧರಿಸಿದ್ದೇನೆ. ಮಾಲೆ ಹಾಕಿರುವುದು ಡಂಬಾಚಾರ, ರಾಜಕೀಯ ಕಾರಣಕ್ಕಾಗಿ ಅಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಸಮೃದ್ದವಾದ ಮಳೆಯಾಗಿ, ಬೆಳೆಗಳು ಬೆಳೆದು ಜನರು ಸುಖದಿಂದ ಇರುವಂತಾಗಲಿ ಎಂದು ಸಂಕಲ್ಪ ಮಾಡಿ ಮಾಲೆ ಧರಿಸಿದ್ದೇನೆ ಎಂದಿದ್ದಾರೆ.
ಸಚಿವರೊಂದಿಗೆ ಹನುಮ ಮಾಲೆ ಧರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಶಶಿಧರಗೌಡ ಪಾಟೀಲ್, ಸೋಮನಾಥ ದೊಡ್ಡಮನಿ, ಸತೀಶ್ ಮುಸ್ಟೂರ ಕ್ಯಾಂಪ್, ಶರಣಪ್ಪ ಕಡೇಮನಿ, ಸುರೇಶ್ ಸಿಂಗನಾಳ, ಸತ್ಯನಾರಾಯಣ ಜಂಗಮರ ಕಲ್ಗುಡಿ, ಶಿವಕುಮಾರ ಬಜಾರ್ ಬೂದಗುಂಪಾ, ಬಸವರಾಜ್ ಸಾಹುಕಾರ ಬೆನ್ನೂರು, ಹನುಮೇಶ್ ಗುರಿಕಾರ, ಬಸವರಾಜ ಗುಂಡೂರ, ಬಸವರಾಜ್ ಹಾಲಸಮುದ್ರ, ಯಮನೂರು ಸೋಮನಾಳ, ಅಮರೇಶ್ ಹಾಲಸಮುದ್ರ, ಉಮೇಶ್ ತಿಮ್ಮಾಪುರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.