ಸ್ವಕ್ಷೇತ್ರಕ್ಕೆ ಆಗಮಿಸಿದ ಸಚಿವ ಶಿವರಾಜ ತಂಗಡಗಿ: ನೀರಿನ ಕ್ಯಾನ್’ಗಳಲ್ಲಿ ಮದ್ಯ ತುಂಬಿ ಹಂಚಿದ ಕಾರ್ಯಕರ್ತರು!

Prasthutha|

ಕೊಪ್ಪಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಅದರಲ್ಲೂ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಭರ್ಜರಿ ಗೆಲವುದು ದಾಖಲಿಸಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

- Advertisement -

ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿ ಸ್ವಕ್ಷೇತ್ರದ ಕನಕಗಿರಿಗೆ ಶಿವರಾಜ ತಂಗಡಗಿ ಆಗಮಿಸಿದ ಹಿನ್ನೆಲೆ ಕಾರ್ಯಕರ್ತರು ನೀರಿನ ಕ್ಯಾನ್ ಗಳಲ್ಲಿ ಮದ್ಯ ತುಂಬಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ.

ನೀರಿನ ಕ್ಯಾನ್’ಗಳಲ್ಲಿ ಮದ್ಯ ತುಂಬಿ ಹಂಚುತ್ತಿರುವ ವೀಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

- Advertisement -

ಸಚಿವರ ಆಗಮನ ಹಿನ್ನೆಲೆ 25 ಲೀಟರ್ ನ ಆರು ನೀರಿನ ಕ್ಯಾನ್ ಗಳಲ್ಲಿ ನೀರು ಬದಲು ಮದ್ಯ ತುಂಬಿಸಿ ಜೊತೆ ಗೆ ಭರ್ಜರಿ ಆಹಾರದ ವ್ಯವಸ್ಥೆ ಕೂಡ ಮಾಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

 ಕನಕಗಿರಿ ಪಟ್ಟಣ ಪಂಚಾಯಿತಿ ಸದಸ್ಯ ನೂರಸಾಬ್ ಗಡ್ಡಿಗಾಲ ಈ ಮದ್ಯದ ಪಾರ್ಟಿಯನ್ನು ನೀಡಿರುವ ಆರೋಪ ಕೇಳಿ ಬಂದಿದೆ. ಕೊಪ್ಪಳ ರಸ್ತೆಯ ತಮ್ಮ ನಿವಾಸದಲ್ಲಿ ನೂರಸಾಬ್ ಗಡ್ಡಿಗಾಲ ನೀರಿನ ಕ್ಯಾನ್ ಗಳಲ್ಲಿ ಕಾರ್ಯಕರ್ತರಿಗೆ ಮದ್ಯದ ವ್ಯವಸ್ಥೆ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.