ಕೆಎಎಸ್‌ ಅಧಿಕಾರಿಗಳ ಸಂಘದ ಕಲ್ಯಾಣ ನಿಧಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಒಂದು ತಿಂಗಳ ವೇತನ ದೇಣಿಗೆ

Prasthutha|

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಒಂದು ತಿಂಗಳ ವೇತನವನ್ನು ಕೆಎಎಸ್‌ ಅಧಿಕಾರಿಗಳ ಕಲ್ಯಾಣ ನಿಧಿಗೆ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.

- Advertisement -

ಇಂದು (ಆ.9) ನಡೆದ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಸಚಿವರು ಶತಮಾನೋತ್ಸವ ಅಂಗವಾಗಿ ಕೆ.ಎ.ಎಸ್‌ ಅಧಿಕಾರಿಗಳ ಸಂಘ ಸ್ಥಾಪಿಸಿದ ಕಲ್ಯಾಣ ನಿಧಿಗೆ  ತಮ್ಮ ದೇಣಿಗೆಯನ್ನು ಪ್ರಕಟಿಸಿದರು.



Join Whatsapp