Home ಟಾಪ್ ಸುದ್ದಿಗಳು ಸಂತೋಷ್ ಮನೆಗೆ ಸಚಿವ ನಿರಾಣಿ ಭೇಟಿ; ಪತ್ನಿಗೆ ನೌಕರಿ, ವೈಯಕ್ತಿಕ ಧನ ಸಹಾಯದ ಭರವಸೆ

ಸಂತೋಷ್ ಮನೆಗೆ ಸಚಿವ ನಿರಾಣಿ ಭೇಟಿ; ಪತ್ನಿಗೆ ನೌಕರಿ, ವೈಯಕ್ತಿಕ ಧನ ಸಹಾಯದ ಭರವಸೆ

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಥಮ ಆರೋಪಿಯಾಗಿರುವ ಕೆ.ಎಸ್ ಈಶ್ವರಪ್ಪ, ತಮ್ಮ ಗ್ರಾಮೀಣಾಭಿವೃದ್ಧಿ ಖಾತೆಗೆ ರಾಜೀನಾಮೆ ನೀಡುವುದಾಗಿ ಘೋಷಿಸುತ್ತಿದ್ದಂತೆ ಇತ್ತ ಗಣಿ ಸಚಿವ ಮುರುಗೇಶ್ ನಿರಾಣಿ ಬೆಳಗಾವಿಯ ವಿಜಯನಗರದಲ್ಲಿರುವ ಸಂತೋಷ್ ಮನೆಗೆ ಭೇಟಿ ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ,”ಸಂತೋಷ್ ಪತ್ನಿಗೆ ನೌಕರಿ ಕೊಡಿಸುವ ಬಗ್ಗೆ ಮನವಿ ಮಾಡಲಾಗಿದೆ. ಅದಕ್ಕೆ ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಮಗಾರಿ ಬಾಕಿ ಬಿಲ್ ಬಿಡುಗಡೆಗೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಸಂತೋಷ್ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರ ಜೊತೆಗೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಧನ ಸಹಾಯ ಮಾಡುವುದಾಗಿ ಪ್ರಕಟಿಸಿರುವ ನಿರಾಣಿ, ಈ ಮೂಲಕ ಮೃತ ಸಂತೋಷ್ ಮನೆಗೆ ಆಡಳಿತಾರೂಢ ಬಿಜೆಪಿ ಪಕ್ಷದಿಂದ ಯಾರೂ ಸಂತೋಷ್ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಲಿಲ್ಲ ಎಂಬ ಟೀಕೆಗೆ ಉತ್ತರ ಕೊಟ್ಟಿದ್ದಾರೆ.

Join Whatsapp
Exit mobile version