ಗಮನ ಸಳೆದ ಸಿರಿಧಾನ್ಯ, ಸಾವಯವ ಮೇಳ: ಶುಗರ್’ನಿಂದ ಕಿಡ್ನಿ ಕಳೆದುಕೊಂಡ ಸಿದ್ದಮಾರಯ್ಯ ಯಶಸ್ವಿ ಉದ್ಯಮಿಯಾದ ಕಥೆ

Prasthutha|

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ  ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಸಿರಿಧಾನ್ಯ ಹಾಗೂ ಸಾವಯವ ಕೃಷಿ ಮೇಳದ ಮೊದಲ ದಿನವೇ ಸಾವಿರಾರು ಮಂದಿ ಭೇಟಿ ನೀಡಿ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳ ಮಾಹಿತಿ ಪಡೆದರು.

- Advertisement -

ಸುಮಾರು 250ಕ್ಕೂ ಅಧಿಕ ಮಳಿಗೆಗಳು ಒಂದೊಂದು ರೀತಿಯಾಗಿದ್ದು ಎಲ್ಲರ ಗಮನ ಸಳೆದವು.

ವಿಶೇಷವಾಗಿ ಸಿರಿಧಾನ್ಯಗಳು ಆರೋಗ್ಯಕ್ಕೆ ಆರೋಗ್ಯಕರ. ಆದರೆ ನವಣೆ, ಸಾಮೆ, ಆರ್ಕ, ಜೋಳ, ಸಜ್ಜೆ ಇತ್ಯಾದಿ ಬೆಳೆಗಳನ್ನು ಶುದ್ದೀಕರಣ, ಅರೆದ ಬಳಿಕವೇ ನಾವು ಬಳಸುವುದು ಮುಖ್ಯ. ಸಿರಿಧಾನ್ಯಗಳನ್ನು ಶುದ್ಧೀಕರಣ, ಅರೆಯಲು ಯಂತ್ರಗಳ ರಾಜ್ಯದ ಎಲ್ಲಡೆ ಸಿಗುವುದು ಅಪರೂಪ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಭವಾನಿ ಇಂಡಸ್ಟ್ರೀಸ್ ಸಿರಿಧಾನ್ಯ ಶುದ್ದೀಕರಣ ಮಾಡುವ ಹಾಗೂ ಅರೆಯುವ ಯಂತ್ರಗಳನ್ನು ಪೂರೈಸುತ್ತಿದೆ. 3ಎಚ್.ಪಿ ಮಾಡೆಲ್’ನ ಯಂತ್ರಗಳನ್ನು ಭವಾನಿ ಇಂಡಸ್ಟ್ರೀಸ್ ಪೂರೈಸುತ್ತಿದೆ. 1946ರಿಂದ ಪ್ರಾರಂಭವಾದ ಈ ಭವಾನಿ ಇಂಡಸ್ಟ್ರೀಸ್ ಇದೇ ಕಾರ್ಯವನ್ನು ಮಾಡುತ್ತಿದೆ.

- Advertisement -

ಸಿರಿಧಾನ್ಯ ಕೃಷಿಕರು ರೈತ ಸಿರಿ ಯೋಜನೆಯಡಿ ಈ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 5 ಲಕ್ಷ ರೂಪಾಯಿ ವರೆಗಿನ ಯಂತ್ರಗಳಿಗೆ ಶೇ.50ರಷ್ಟು ಸಬ್ಸಿಡಿ ಪಡೆಯಬಹುದಾಗಿದೆ ಎಂದು ಹೇಳುತ್ತಾರೆ ಭವಾನಿ ಇಂಡಸ್ಟ್ರೀಸ್ ಮಾಲೀಕ ಟಿ.ಮನೋಹರ್.

ಸಿರಿಧಾನ್ಯ ಶುದ್ದೀಕರಣ ಯಂತ್ರಗಳನ್ನು ಕೊಂಡುಕೊಳ್ಳುವವರು ಮೇಳದಲ್ಲಿ ಪ್ರವೇಶದ ದ್ವಾರದ ಬಲ ಭಾಗದಲ್ಲಿ ಭವಾನಿ ಇಂಡಸ್ಟ್ರಿಸ್ ಮಳಿಗೆಗೆ ಭೇಟಿ ಕೊಡಬಹುದಾಗಿದೆ.

 ಶುಗರ್ ನಿಂದ ಕಿಡ್ನಿ ವೈಫಲ್ಯ ಹೊಂದಿದವ ಸಿರಿಧಾನ್ಯ ಉತ್ಪನ್ನಗಳ ಉದ್ದಿಮೆಯಾದ ಕಥೆ

ಅತಿಯಾದ ಶುಗರ್’ನಿಂದ ಬಿಡದಿಯ ಬೆತ್ತನಗೆರೆಯ ಎನ್.ಸಿದ್ದಮಾರಯ್ಯ ದಂಪತಿ ಕಿಡ್ನಿ ವೈಫಲ್ಯ ದಿಂದ ಇನ್ನೇನು ಸಾವಿನ ಹಾದಿ ಹಿಡಿದಿದ್ದರು. ಸಿರಿಧಾನ್ಯದಿಂದ ತಯಾರಿಸಿದ ಡಯಾಬಿಟಿಕ್ ಮಿಕ್ಸ್ ಬಳಕೆಯಿಂದ ಜೀವ ಉಳಿಸಿಕೊಂಡ ಎನ್ .ಸಿದ್ದಮಾರಯ್ಯ ದಂಪತಿ  ತಮಗೆ ಇರುವ ಬಾರ್, ಹೋಟೆಲ್ ಬ್ಯುಸಿನೆಸ್’ಗೆ ತಿಲಾಂಜಲಿ ನೀಡಿ ತಮ್ಮ ಜೀವರಕ್ಷಿಸಿದ ಸಿರಿಧಾನ್ಯ ಉತ್ಪನ್ನಗಳ ವ್ಯವಹಾರ, ತಯಾರಿಕೆ ಶುರು ಮಾಡಿ ಯಶಸ್ವಿಯಾಗಿ ಬಿಡದಿ ಸಮೀಪದ ಹೆಜ್ಜಾಲದಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ “ಸಂಜೀವಿನಿ ಸಿರಿಧಾನ್ಯ  ತಯಾರಿಕಾ ಕೇಂದ್ರ” ನಡೆಸುತ್ತಿದ್ದಾರೆ. ಸುಮಾರು ಇಪ್ಪತೈದಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ಸಂಜೀವಿನಿ ಸಿರಿಧಾನ್ಯ ಬ್ರಾಂಡ್ ನಡಿ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಹೊರತಂದಿದ್ದಾರೆ.

ಡಿಯೋ ಪ್ರೋ ಹೆಸರಿನ ಸಿರಿಧಾನ್ಯ ಮಿಕ್ಸ್,  ಶುಗರ್, ಗ್ಯಾಸ್,  ನಿದ್ರಾಹೀನತೆಗೆ ಉತ್ತಮ ರಾಮಬಾಣವಾಗಿದೆ ಎಂದು ಹೇಳುತ್ತಾರೆ ಸಿದ್ದ ಮಾರಯ್ಯ.

ಒಟ್ಟಾರೆ 2019ರ ನಂತರ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಬೃಹತ್ ಸಿರಿಧಾನ್ಯ ಸಾವಯವ ಕೃಷಿ ಮೇಳ ಸಾರ್ವಜನಿಕರ ಗಮನ ಸಳೆಯುತ್ತಿವೆ.

Join Whatsapp