Home ಟಾಪ್ ಸುದ್ದಿಗಳು ಮಂಡ್ಯದಲ್ಲಿ ಕ್ಷೀರಕ್ರಾಂತಿ: ಹಾಲು ಉತ್ಪಾದನೆಯಲ್ಲಿ ಕಬ್ಬಿನ ನಾಡಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಮಂಡ್ಯದಲ್ಲಿ ಕ್ಷೀರಕ್ರಾಂತಿ: ಹಾಲು ಉತ್ಪಾದನೆಯಲ್ಲಿ ಕಬ್ಬಿನ ನಾಡಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಮಂಡ್ಯ: ಅತಿ ಹೆಚ್ಚು ಹಾಲು ಉತ್ಪಾದನೆಯೊಂದಿಗೆ ಮಂಡ್ಯ ಕ್ಷೀರಕ್ರಾಂತಿ ಮಾಡಿದೆ. ದಿನನಿತ್ಯ 10 ಲಕ್ಷ ಕಿಲೋಗೂ ಅಧಿಕ ಹಾಲು ಶೇಖರಣೆಯೊಂದಿಗೆ ಮಂಡ್ಯ ಜಿಲ್ಲಾಹಾಲು ಒಕ್ಕೂಟ (ಮನ್‌ಮುಲ್‌) ಜಿಲ್ಲಾವಾರು ಹಾಲು ಶೇಖರಣೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಈ ವರ್ಷ ಜೂ.15ರಂದು 10,36,294 ಕಿಲೋ ಹಾಲು ಸಂಗ್ರಹಿಸಿ ಹೊಸ ದಾಖಲೆ ನಿರ್ಮಿಸಿದ್ದು ಈ ಮೂಲಕ ತನ್ನದೇ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಇದರೊಂದಿಗೆ ಹಾಲು ಸಂಗ್ರಹಣೆಯಲ್ಲಿ ರಾಜ್ಯದ ಇತರ ಒಕ್ಕೂಟಗಳಿಗಿಂತ ಮನ್‌ಮುಲ್‌ ಮುಂಚೂಣಿಯಲ್ಲಿದೆ.

ಜಿಲ್ಲಾವಾರು ಹಾಲು ಉತ್ಪಾದನೆಯಲ್ಲಿ ಸತತ 9 ವರ್ಷಗಳಿಂದ ಮಂಡ್ಯ ಪ್ರಥಮ ಸ್ಥಾನದಲ್ಲಿದೆ. 2015ರಲ್ಲಿ 7.71ಲಕ್ಷ ಕಿಲೋ, 2016ರಲ್ಲಿ 7.88 ಲಕ್ಷ ಕೆಜಿ, 2017ರಲ್ಲಿ 9.18 ಲಕ್ಷ ಕಿಲೋ, 2018ರಲ್ಲಿ 9.34 ಲಕ್ಷ ಕಿಲೋ, 2019ರಲ್ಲಿ 9.19 ಲಕ್ಷ ಕಿಲೋ, 2020ರಲ್ಲಿ 9.34 ಲಕ್ಷ ಕಿಲೋ, 2021ರಲ್ಲಿ 9.73 ಲಕ್ಷ ಕಿಲೋ ಹಾಲು ಸಂಗ್ರಹವಾಗಿತ್ತು.

Join Whatsapp
Exit mobile version