ಹಾಲು, ಮೊಸರು ದರ ಏರಿಕೆ: ಮರುಪಾವತಿ ಪಡೆದರೆ ದರ ಹೆಚ್ವಿಸುವ ಅಗತ್ಯವಿಲ್ಲ- ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಬ್ರಾಂಡೆಡ್ ಹಾಗೂ ಪ್ಯಾಕೇಜ್ಡ್ ಹಾಲು, ಮೊಸರು ಮಾರುವವವರಿಗೆ ಮಾತ್ರ 5%  ಜಿ.ಎಸ್.ಟಿ ಹಾಕಲಾಗಿದೆ. ಇದನ್ನು ಅವರು  ಕ್ಲೇಮು ಮಾಡಲು ಅವಕಾಶವಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

- Advertisement -

ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

 ಮರುಪಾವತಿ ಪಡೆದರೆ ಅವರು ಇದನ್ನು ವಾಪಸ್ಸು ಪಡೆಯಬಹುದು. ಈಗಿನ ದರಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ. ಹೆಚ್ಚಳ ಮಾಡುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ಬರುವ ದಿನಗಳಲ್ಲಿ ಗಮನಹರಿಸಲಾಗುವುದು. ಗ್ರಾಹಕರಿಗೆ ಅದನ್ನು ದಾಟಿಸಬಾರದು . ಇದನ್ನು ಜಿ.ಎಸ್.ಟಿ ಮಂಡಳಿಯಲ್ಲಿ ಚರ್ಚಿಸಿ, ಸೂಚನೆ ನೀಡಲಾಗುವುದು ಎಂದರು.

- Advertisement -

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು  ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ 2/3  ಬಹುಮತದೊಂದಿಗೆ ಗೆಲ್ಲುವುದು ನಿಶ್ಚಿತ  ಎಂದು ಬೊಮ್ಮಾಯಿ ತಿಳಿಸಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಇದ್ದ ಹಿಂದಿನ  ದಾಖಲೆಯನ್ನು  ಮುರಿಯುವ ಎಲ್ಲಾ ಸಾಧ್ಯತೆಗಳಿವೆ.  ದ್ರೌಪದಿ ಮುರ್ಮು ಅವರು ಮಾನವೀಯ ಗುಣಗಳನ್ನು ಹೊಂದಿದ್ದು, ಅತ್ಯುನ್ನತ ಸ್ಥಾನ ಕ್ಕೇರುವುದು ಭಾರತದ ಪ್ರಜಾಪ್ರಭುತ್ವ ಹಾಗೂ ಭವಿಷ್ಯಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದರು.

ದೇಶಾದ್ಯಂತ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ದೆಹಲಿ, ಸಂಸತ್ತಿನಲ್ಲಿ, ರಾಜ್ಯ ಸಭಾ, ಲೋಕಸಭಾ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ನಡೆಯುತ್ತಿದೆ. ಎನ್.ಡಿ.ಎ  ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬಹಳಷ್ಟು ಸಹಮತ ಮತ್ತು  ಸಂತೋಷ ದೇಶಾದ್ಯಂತ ಮೂಡಿಬಂದಿದೆ. ಎನ್.ಡಿ.ಎ ಮಿತ್ರ ಪಕ್ಷಗಳಷ್ಟೇ ಅಲ್ಲ ವಿರೋಧ ಪಕ್ಷದ ಲ್ಲಿಯೂ ಮುಕ್ತವಾಗಿ ಬೆಂಬಲ ಸೂಚಿಸಿದ್ದಾರೆ.  ದ್ರೌಪದಿ ಮುರ್ಮು ಅವರು ಒಬ್ಬ ದಕ್ಷ ಆಡಳಿತಗಾರರಾಗಿ,  ಮುನಿಸಿಪಾಲಿಟಿ ಉಪಾಧ್ಯಕ್ಷೆಯಾಗಿ, ಮಂತ್ರಿ,  ಶಾಸಕರು ಮತ್ತು ರಾಜ್ಯಪಾಲರಾಗಿ ಅವರ ಸೇವೆ ಅಮೋಘವಾಗಿದೆ. ಬುಡಕಟ್ಟು ಸಮುದಾಯದಿಂದ ಬಂದವರು, ಉತ್ತಮ ಕೆಲಸ ಮಾಡಿದವರಿಗೆ ಅತ್ಯುನ್ನತ ಸ್ಥಾನ ಲಭಿಸುತ್ತಿದೆ.  ಪ್ರಜಾಪ್ರಭುತ್ವದ ಹಿರಿಮೆ ಮತ್ತು ಗರಿಮೆ. ಇಂಥ ಕೆಲಸವನ್ನು ಎನ್.ಡಿ.ಎ.ಮುಖ್ಯಸ್ಥರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಯ್ಕೆ ಮಾಡಿ ಇದೀ ದೇಶದಲ್ಲಿ ಒಂದು ಸಂಚಲನ ಹಾಗೂ ಸಂದೇಶವನ್ನು ನೀಡಿದ್ದಾರೆ. ವಿರೋಧಪಕ್ಷದಲ್ಲಿರುವವರು ನಮ್ಮ ಕರ್ನಾಟಕದ ಜೆ.ಡಿ.ಎಸ್. ಮುಖ್ಯಸ್ಥರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಜಾರ್ಖಂಡ್ ಮುಕ್ತಿ ಮೋರ್ಚಾ, ವೈ. ಎಸ್.ಆರ್ ಪಕ್ಷ ಸೇರಿದಂತೆ ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ ಗೆಲ್ಲುವುದು ನಿಶ್ಚಿತ ಎಂದರು.



Join Whatsapp