ಉಗ್ರರು ಪೊಲೀಸರನ್ನು ಹತ್ಯೆ ಮಾಡುತ್ತಿದ್ದರೂ ಕೇಂದ್ರ ಗೃಹ ಮಂತ್ರಿ ಕರ್ನಾಟಕದ ಜನರನ್ನು ಬೆದರಿಸುವುದರಲ್ಲಿ ನಿರತರಾಗಿದ್ದಾರೆ: ಎಸ್’ಡಿಪಿಐ ಕಿಡಿ

Prasthutha|

ಬೆಂಗಳೂರು: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಉಗ್ರವಾದಿಗಳು ಐವರು ಸೈನಿಕರನ್ನು ಕೊಂದಿದ್ದಾರೆ. ಛತ್ತೀಸಘಡದ ದಾಂತೆವಾಡಾದಲ್ಲಿ ನಕ್ಸಲರು 11 ಜನ ಪೋಲಿಸರನ್ನು ಕೊಂದಿದ್ದಾರೆ. ಆ ಬಗ್ಗೆ ಕಾಳಜಿ ವಹಿಸದ ದೇಶದ ಗೃಹಮಂತ್ರಿ ಮಾತ್ರ ಕರ್ನಾಟಕದ ಜನರನ್ನು ಬೆದರಿಸುವುದರಲ್ಲಿ ವ್ಯಸ್ತರಾಗಿದ್ದಾರೆ ಎಂದು ಎಸ್’ಡಿಪಿಐ ಆರೋಪಿಸಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗಲಭೆಗೆ ಕಾರಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಶ್ಮೀರ ಮತ್ತು ಛತ್ತೀಸ್’ಗಡದಲ್ಲಿ ಉಗ್ರವಾದಿಗಳು ಮತ್ತು ನಕ್ಸಲರು ನಮ್ಮ ಪೊಲೀಸರು ಮತ್ತು ಸೈನಿಕರನ್ನು ಕೊಲ್ಲುತ್ತಿದ್ದರೂ ಈ ಬಗ್ಗೆ ಗಮನ ಹರಿಸದ ಕೇಂದ್ರ ಗೃಹ ಮಂತ್ರಿ ಕರ್ನಾಟಕದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.



Join Whatsapp