ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಾಗಿನಿಂದ ಆ್ಯಕ್ಷನ್ ಮೋಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚೀನಾವನ್ನು ಮೂಲೆಗುಂಪು ಮಾಡಲು ಟ್ರಂಪ್ ಈಗಾಗಲೇ ಸಂಪೂರ್ಣ ತಯಾರಿ ಆರಂಭಿಸಿದ್ದಾರೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿವೃತ್ತ ಸೇನಾ ರಾಷ್ಟ್ರೀಯ ಗಾರ್ಡ್ ಅಧಿಕಾರಿ ಮೈಕ್ ವಾಲ್ಟ್ಜ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದ್ದಾರೆ.
ಫ್ಲೋರಿಡಾ ರಿಪಬ್ಲಿಕನ್ ನಾಯಕ ಮೈಕ್ ವಾಲ್ಟ್ಜ್ ಅವರನ್ನು ಈ ಸ್ಥಾನದಲ್ಲಿ ಸೇವೆ ಸಲ್ಲಿಸುವಂತೆ ಟ್ರಂಪ್ ಕೇಳಿಕೊಂಡಿದ್ದಾರೆ. ಅಜಿತ್ ದೋವಲ್ ಭಾರತದಲ್ಲಿ ಈ ಹುದ್ದೆಯಲ್ಲಿದ್ದಾರೆ. ವಾಲ್ಟ್ಜ್ ಅವರು ಈ ಹುದ್ದೆಯನ್ನು ನಿರ್ವಹಿಸುವಾಗ ಭೌಗೋಳಿಕ ರಾಜಕೀಯಕ್ಕೆ ಸಂಬಂಧಿಸಿದ ಅನೇಕ ಸಂಕೀರ್ಣ ವಿಷಯಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ವಾಲ್ಟ್ಜ್ ಟ್ರಂಪ್ ಅವರ ಕಟ್ಟಾ ಬೆಂಬಲಿಗ. ಅವರು ಅಫ್ಘಾನಿಸ್ತಾನದಲ್ಲಿ ಹಲವಾರು ಬಾರಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ, ಅವರು ಪೆಂಟಗನ್ನಲ್ಲಿ ಎರಡು ಬಾರಿ ನೀತಿ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಮ್ ಬೀಚ್ನಲ್ಲಿರುವ ಟ್ರಂಪ್ರ ಮಾರ್ ಎ ಲಾಗೋ ರೆಸಾರ್ಟ್ನಲ್ಲಿ ವಾಲ್ಟ್ಜ್ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.