ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಬಳಿಕ, ಅಧಿಕಾರ ವರ್ಗಾವಣೆ ಸುಲಲಿತವಾಗಿ ನಡೆಯಲಿದೆ ಎಂದು ವಿದೇಶಾಂಗ ಸಚಿವ ಮೈಕ್ ಪೊಂಪ್ಯೊ ಭರವಸೆ ನೀಡಿದ್ದಾರೆ. ಆದರೆ, ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯನ್ನು ಒಪ್ಪಲು ಅವರು ನಿರಾಕರಿಸಿದ್ದಾರೆ.
“ಎರಡನೇ ಟ್ರಂಪ್ ಆಡಳಿತಕ್ಕೆ ಅಧಿಕಾರ ಸುಲಲಿತವಾಗಿ ವರ್ಗಾವಣೆಯಾಗಲಿದೆ’’ ಎಂದು ಪೊಂಪ್ಯೊ ಹೇಳಿದ್ದಾರೆ. ಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಜೋ ಬೈಡನ್ ಗೆಲುವಿಗೆ ಜಾಗತಿಕ ನಾಯಕರು ಈಗಾಗಲೇ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮತ ಎಣಿಕೆಯಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂದಿರುವ ಅವರು, ಮರುಎಣಿಕೆಗೆ ಒತ್ತಾಯಿಸಿದ್ದಾರೆ.