ಬೆಂಗಳೂರು: ಬಸ್ ಟಿಕೆಟ್ನಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯ ಮುದ್ರಿಸಿರುವ ಬಗ್ಗೆ KSRTC ಸ್ಪಷ್ಟನೆ ನೀಡಿದ್ದು, ಅಚಾತುರ್ಯದಿಂದ ಹಾಗಾಗಿತ್ತು, ಮುದ್ರಿತ ಸಂದೇಶ ತೆಗೆದು ಹಾಕಲಾಗಿದೆ ಎಂದು ಹೇಳಿದೆ.
ಟಿಕೆಟ್ನಲ್ಲಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸುವ ಸಂದೇಶ ಪ್ರಿಂಟ್ ಆಗಿರುವ ಬಗ್ಗೆ ಕೆಎಸ್ಆರ್ಟಿಸಿ ವಿರೋಧ ವ್ಯಕ್ತವಾಗಿತ್ತು. ಹಿಂದು ಧರ್ಮದ ಹಬ್ಬಗಳಿಗೆ ಈವರೆಗೆ ಯಾಕೆ ಶುಭಾಶಯ ಸಂದೇಶ ಟಿಕೆಟ್ನಲ್ಲಿ ಮುದ್ರಿಸಿಲ್ಲ ಎಂದು ಪ್ರಶ್ನಿಸಲಾಗಿತ್ತು.
ಕೆಎಸ್ಆರ್ಟಿಸಿ ನಿಗಮದ ಒಟ್ಟು 83 ಟಕಗಳಲ್ಲಿ 16 ವಿಭಾಗಗಳಿದ್ದು, ನಿತ್ಯ 10,200 ಇಟಿಎಂ(ಇಲೆಕ್ಟ್ರಿಕ್ ಟಿಕೆಟ್ ಮೆಶಿನ್)ಗಳಲ್ಲಿ ಮುದ್ರಿತ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುತ್ತದೆ. ಟಿಕೆಟ್ ವಿತರಣಾ ಯಂತ್ರಗಳ ಮೂಲಕ ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬ ಹಾಗೂ ಇತರ ರಜಾ ದಿನಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಬಹುದಾಗಿದೆ. ಈ ವ್ಯವಸ್ಥೆಯನ್ನು ಟಕಗಳಲ್ಲಿ ಆಂತರಿಕ ಬಳಕೆಗಾಗಿ ಮಾತ್ರ ಕಲ್ಪಿಸಲಾಗಿದೆ. ಟಿಕೆಟ್ನಲ್ಲಿ ದಾಖಲಾಗಿರುವ ಕ್ರಿಸ್ಮಸ್ ಹಬ್ಬದ ಸಂದೇಶ ಡಿ.25ರಂದು ಮಾತ್ರ ಮುದ್ರಿತವಾಗಿದೆ. ಇದು ಚಿಕ್ಕಬಳ್ಳಾಪುರ ವಿಭಾಗದ, ಚಿಕ್ಕಬಳ್ಳಾಪುರ, ಶಿಡ್ಲಟ್ಟ ಮತ್ತು ಚಿಂತಾಮಣಿ ಟಕದ ಟಿಕೆಟ್ಗಳಲ್ಲಿ ಮಾತ್ರ ಮುದ್ರಿತವಾಗಿದೆ. ಇದನ್ನು ಈಗಾಗಲೇ ಸರಿಪಡಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಸ್ಪಷ್ಟನೆ ನೀಡಿದೆ.