Home ಜಾಲತಾಣದಿಂದ ಆ್ಯಕ್ಸಿಸ್‌ ಜತೆಗೆ ಸಿಟಿ ಬ್ಯಾಂಕ್‌ ವಿಲೀನ

ಆ್ಯಕ್ಸಿಸ್‌ ಜತೆಗೆ ಸಿಟಿ ಬ್ಯಾಂಕ್‌ ವಿಲೀನ

ಹೊಸದಿಲ್ಲಿ: ಆ್ಯಕ್ಸಿಸ್‌ ಬ್ಯಾಂಕ್‌ ಜತೆಗೆ ಸಿಟಿಬ್ಯಾಂಕ್‌ ಇಂಡಿಯಾದ ಸಂಪೂರ್ಣ ವಿಲೀನ ಪ್ರಕ್ರಿಯೆ ಮುಂದಿನ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಆ್ಯಕ್ಸಿಸ್‌ ಬ್ಯಾಂಕ್‌ ಎಂಡಿ, ಸಿಇಒ ಅಮಿತಾಬ್‌ ಚೌಧರಿ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಮಾರು 24 ಲಕ್ಷ ಸಿಟಿಬ್ಯಾಂಕ್‌ ಗ್ರಾಹಕರು ಇನ್ನು ಮುಂದೆ ಆ್ಯಕ್ಸಿಸ್‌ ಬ್ಯಾಂಕ್‌ ಗ್ರಾಹಕರಾಗಲಿದ್ದಾರೆ. 3,200 ಸಿಟಿಬ್ಯಾಂಕ್‌ ಉದ್ಯೋಗಿಗಳು(ಶೇ.96ರಷ್ಟು ಉದ್ಯೋಗಿಗಳು) ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೇರುವ ಸಿಟಿಬ್ಯಾಂಕ್‌ ಗ್ರಾಹಕರ ಖಾತೆ ಸಂಖ್ಯೆ, ಚೆಕ್‌ ಬುಕ್‌, ಡೆಬಿಟ್‌ ಕಾರ್ಡ್‌ ಸೇರಿದಂತೆ ಈಗಿರುವ ಸೌಲಭ್ಯಗಳು ಹಾಗೆಯೇ ಮುಂದುವರಿಯಲಿದೆ.

Join Whatsapp
Exit mobile version