Home ಟಾಪ್ ಸುದ್ದಿಗಳು ಮಹಿಳೆಯರು ಧರಿಸುವ ಬಟ್ಟೆಯಿಂದ ಪುರುಷರು ಉದ್ವೇಗಕ್ಕೆ ಒಳಗಾಗಿ ಅತ್ಯಾಚಾರವೆಸಗುತ್ತಾರೆ: ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ

ಮಹಿಳೆಯರು ಧರಿಸುವ ಬಟ್ಟೆಯಿಂದ ಪುರುಷರು ಉದ್ವೇಗಕ್ಕೆ ಒಳಗಾಗಿ ಅತ್ಯಾಚಾರವೆಸಗುತ್ತಾರೆ: ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ

►ವಿದ್ಯಾರ್ಥಿಗಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು ಎಂದು ಕರೆ ನೀಡಿದ ಶಾಸಕ

ನವದೆಹಲಿ: ವಿದ್ಯಾರ್ಥಿಗಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಮಹಿಳೆಯರು ತೊಡುವ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರು ಧರಿಸುವ ಬಟ್ಟೆಯಿಂದ ಪುರುಷರು ಉದ್ವೇಗಕ್ಕೆ ಒಳಗಾಗಿ ಅತ್ಯಾಚಾರ ಹೆಚ್ಚಾಗುತ್ತಿವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆದ ಶಾಸಕ ಎಂ.ಪಿ. ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೇಳಿಕೆ ವಿವಾದವಾಗುತ್ತಿದ್ದಂತೆ ಕ್ಷಮೆಯಾಚಿಸಿರುವ ಅವರು, ನಾನು ಮಹಿಳೆಯರ ಬಗ್ಗೆ  ಲಘುವಾಗಿ ಮಾತನಾಡಿಲ್ಲ, ಅವರ ಬಗ್ಗೆ ಅಪಾರವಾದ ಗೌರವವಿದೆ. ಪ್ರಿಯಾಂಕಾ ವಾದ್ರಾ ಹೇಳಿಕೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಹೇಳಿದ್ದೆ, ಆದರೆ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ.  ನಾನು ಯಾರ ಮನಸ್ಸಿಗೂ ನೋವಾಗುವ ರೀತಿ ಹೇಳಿಕೆ ಕೊಟ್ಟಿಲ್ಲ, ನನ್ನ ಹೇಳಿಕೆಯಿಂದ ಅವರಿಗೇನಾದರೂ ನೋವಾಗಿದ್ದರೆ ಅವರಲ್ಲಿ ಕ್ಷಮೆ ಕೇಳುತ್ತೇನೆ, ನನಗೆ ಹೆಣ್ಣು ಮಕ್ಕಳ  ಬಗ್ಗೆ ಅಪಾರ ಗೌರವವಿದೆ ಎಂದು ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಹಿಜಾಬ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬಿಕಿನಿ ಇರಲಿ, ಘೂಂಗಟ್ ಇರಲಿ, ಜೀನ್ಸ್ ಅಥವಾ ಹಿಜಾಬ್ ಇರಲಿ, ಯಾವುದೇ ಆಗಲಿ ಅದು ಧರಿಸುವ ಮಹಿಳೆಯ ಹಕ್ಕು. ಭಾರತದ ಸಂವಿಧಾನ ಈ ಹಕ್ಕನ್ನು ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. #ಲಡ್ಕಿಹೂ, ಲಡ್ ಸಕ್ತಿ ಹೂ..’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ರೇಣುಕಾಚಾರ್ಯ ಈ ಮೇಲಿನ ಹೇಳಿಕೆ ನೀಡಿದ್ದರು.

 ಈವರೆಗೂ ಮುಸ್ಲಿಮರನ್ನು  ಮತದ ಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್ ಗೆ ಈ ಸಮುದಾಯವೂ ಕೂಡ ಕೈಬಿಟ್ಟು ಹೋಗುತ್ತದೆ ಎಂಬುದರ ಅರಿವಾಗಿದೆ, ಹೀಗಾಗಿ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿ ಕೋಮುಗಲಭೆಗೆ ಸೃಷ್ಟಿಸಲು ಕಾರಣವಾಗುತ್ತಿದ್ದು, ನಮ್ಮ ಸರ್ಕಾರ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

 ಸರ್ಕಾರ ಮತ್ತು ಪಕ್ಷಕ್ಕೆ ಹೇಗಾದರೂ ಮಾಡಿ ಕೆಟ್ಟ ಹೆಸರು ತರಲು ಕೆಲವು ಮೂಲಭೂತ ಸಂಘಟನೆಗಳು ನಿರಂತರವಾಗಿ ಒಂದಿಲ್ಲೊಂದು ಪ್ರಯತ್ನಗಳನ್ನು ನಡೆಸುತ್ತಲೇ ಇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳುಗೆಡವಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಷಡ್ಯಂತ್ರ ನಡೆದಿದೆ ಎಂದು ಅವರು ಟೀಕಿಸಿದರು.

ಹಿಜಾಬ್ ವಿವಾದದಿಂದಾಗಿ  ಕಾಂಗ್ರೆಸ್ ನವರಿಗೆ ಅಲ್ಪಸಂಖ್ಯಾತರ ಮತಗಳು ತಪ್ಪಿ ಹೋಗುವ ಭೀತಿ ಎದುರಾಗಿದೆ. ಬಿಜೆಪಿಗೆ ಎಲ್ಲ ಸಮುದಾಯದಿಂದ ಬೆಂಬಲ ವ್ಯಕ್ತವಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಹಿಂದುಳಿದ ಸಮುದಾಯಗಳು ನಮಗೆ ಬೆಂಬಲ ನೀಡುತ್ತಿವೆ, ಇದರಿಂದ ಹತಾಶರಾಗಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಷಡ್ಯಂತ್ರ ಕಾಂಗ್ರೆಸ್ನಿಂದ ನಡೆಯುತ್ತಿದೆ ಎಂದು ಆರೋಪಿಸಿದರು.  

ರಾಜ್ಯದಲ್ಲಿ   ಪದೇ ಪದೇ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿರುವ ಪಿಎಫ್ ಐ ಮತ್ತು  ಎಸ್ ಡಿಪಿಐ ಸಂಘಟನೆಯನ್ನು ತಕ್ಷಣವೇ ನಿಷೇಸಬೇಕೆಂದು ಅವರು ಆಗ್ರಹಿಸಿದರು.

Join Whatsapp
Exit mobile version