Home ಟಾಪ್ ಸುದ್ದಿಗಳು ಮೆಹಬೂಬಾ ಮುಫ್ತಿಗೆ ಮತ್ತೆ ಗೃಹ ಬಂಧನ

ಮೆಹಬೂಬಾ ಮುಫ್ತಿಗೆ ಮತ್ತೆ ಗೃಹ ಬಂಧನ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪಿಡಿಪಿ- ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿಯವರು ಇಂದು ಟ್ವೀಟ್ ಮಾಡಿ ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇಟ್ಟಿದ್ದಾರೆ, ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಇನ್ನೂ ಬಹಳ ದೂರದಲ್ಲಿದೆ ಎಂದು ಟೀಕಿಸಿದ್ದಾರೆ. ಕಾಶ್ಮೀರದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಆದ್ದರಿಂದ ನಿಮ್ಮನ್ನು ಗೃಹ ಬಂಧನದಲ್ಲಿ ಇಡಲಾಗುತ್ತಿದೆ ಎಂದು ಆಡಳಿತಾಧಿಕಾರಿಗಳು ಮೆಹಬೂಬಾರಿಗೆ ತಿಳಿಸಿದ್ದಾಗಿ ತಿಳಿದು ಬಂದಿದೆ. ಅಂದರೆ ಕಾಶ್ಮೀರವು ಮಾಮಾಲು ಸ್ಥಿತಿಗೆ ಬಂದಿದೆ ಎಂಬ ಮಾತು ಸುಳ್ಳು ಎಂದಾಯಿತು ಎಂದು ಮೆಹಬೂಬಾ ಮುಫ್ತಿಯವರು ಟ್ವೀಟ್ ನಲ್ಲಿ ಹೇಳಿದ್ದಾರೆ.


ಕಾಶ್ಮೀರದ ನಾಯಕ ಸಯ್ಯದ್ ಆಲಿ ಶಾ ಗೀಲಾನಿಯವರ ಅಂತ್ಯಕ್ರಿಯೆ ನಡೆಸಲು ಅವರ ಕುಟುಂಬದವರಿಗೆ ಅವಕಾಶ ನೀಡದಿರುವುದರ ಬಗೆಗೆ ಮುಫ್ತಿ ಟೀಕೆ ಮಾಡಿದ್ದಾರೆ. “ಆಳುವವರು ಗೀಲಾನಿ ಕುಟುಂಬಕ್ಕೆ ಅಂತ್ಯಕ್ರಿಯೆ ನಡೆಸಲು ಬಿಡಲಿಲ್ಲ ಅಷ್ಟೇ ಅಲ್ಲ ಹಕ್ಕು ಮಂಡಿಸಿದ ಮಹಿಳೆಯರನ್ನು ಪೋಲೀಸರಿಂದ ಹೊಡೆಸಿದ್ದಾರೆ. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಮುಂದಿಡಲು ಅವಕಾಶ ಇದೆ; ಇರಬೇಕು” ಎಂದೂ ಅವರು ಹೇಳಿದರು.


ಕಾಶ್ಮೀರ ತನ್ನದೇ ಸಂಸ್ಕೃತಿ ಹೊಂದಿದ್ದು, ಅದಕ್ಕೆ ಅದರದ್ದೇ ಆದ ಜಾಗತಿಕ ಮನ್ನಣೆ ಇದೆ. ಎಲ್ಲ ಮುಗಿದ ಮೇಲೆ ಪೊಲೀಸರು, ಗೀಲಾನಿಯವರ ಮಗ ಅವರ ದೇಹವನ್ನು ರಾತ್ರಿ ವೇಳೆ ಹೂಳಲು ಅನುಮತಿ ನೀಡಿದ್ದರು ಎನ್ನುವುದು ಅನುಮಾನಾಸ್ಪದ ಎಂದು ಮುಫ್ತಿಯವರು ಟೀಕಿಸಿದ್ದಾರೆ. ಎಲ್ಲ ಸರಿಹೋಗಿದೆ ಎಂದವರು, ಗೀಲಾನಿಯವರ ಮರಣದ ಬೆನ್ನಿಗೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮುಫ್ತಿ ಕುಟುಕಿದ್ದಾರೆ.

Join Whatsapp
Exit mobile version