Home ಟಾಪ್ ಸುದ್ದಿಗಳು ವೇಶ್ಯಾವಾಟಿಕೆ ದಂಧೆ: ಮೇಘಾಲಯ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರೆಸ್ಟ್

ವೇಶ್ಯಾವಾಟಿಕೆ ದಂಧೆ: ಮೇಘಾಲಯ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರೆಸ್ಟ್

ಹಾಪುರ್; ಮೇಘಾಲಯ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬರ್ನಾರ್ಡ್ ಎನ್ ಮರಕ್ ಎಂಬಾತ ತುರಾದಲ್ಲಿರುವ ತನ್ನ ಫಾರ್ಮ್ಹೌಸ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಆತನನ್ನು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮರಕ್ ನ ಫಾರ್ಮ್ ಹೌಸಿಗೆ ಪೊಲೀಸರು ದಾಳಿ ನಡೆಸಿದ್ದು ದಾಳಿಯ ವೇಳೆ ಆರು ಅಪ್ರಾಪ್ತರನ್ನು ರಕ್ಷಿಸಿದ್ದಾರೆ.  73 ಜನರನ್ನು ಅವರ ಫಾರ್ಮ್ಹೌಸ್ ‘ರಿಂಪು ಬಾಗನ್’ ನಿಂದ ಬಂಧಿಸಿದ ನಂತರ ಮರಕ್ ಮಾತ್ರ ಅಲ್ಲಿಂದ ಪರಾರಿಯಾಗಿದ್ದನು. ಮೇಘಾಲಯ ಪೊಲೀಸರು ಬಿಜೆಪಿ ನಾಯಕನಿಗೆ ಲುಕ್ಔಟ್ ನೋಟಿಸ್ ನೀಡಿದ ಕೆಲವೇ ಗಂಟೆಗಳ ನಂತರ ಆತನ ಬಂಧನವಾಗಿದೆ ಮತ್ತು ನಿನ್ನೆ ತುರಾ ನ್ಯಾಯಾಲಯವು ಮರಕ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಮೇಘಾಲಯ ಡಿಜಿಪಿ ಎಲ್.ಆರ್.ಬಿಷ್ಣೋಯ್ ತಿಳಿಸಿದ್ದಾರೆ.

ತುರಾದಲ್ಲಿನ ಮಾರಕ್ ಒಡೆತನದ ರೆಸಾರ್ಟ್ನಲ್ಲಿ ಬಂಧನದಲ್ಲಿದ್ದ ಆರು ಮಕ್ಕಳನ್ನು ಶನಿವಾರ ರಕ್ಷಿಸಲಾಗಿದೆ ಎಂದು ಬಿಷ್ಣೋಯ್ ತಿಳಿಸಿದ್ದು, ವೇಶ್ಯಾಗೃಹ ನಡೆಸ್ತಿದ್ದ ಆ ಸ್ಥಳದಿಂದ ದಾಳಿಯ ವೇಳೆ 47 ಯುವಕರು ಮತ್ತು 26 ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.  ದಾಳಿಯ ವೇಳೆ  ಅಪಾರ ಪ್ರಮಾಣದ ಮದ್ಯ, ಸುಮಾರು 500 ಗರ್ಭನಿರೋಧಕ ಪ್ಯಾಕೆಟ್ಗಳು, ಸೆಲ್ಫೋನ್ಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

Join Whatsapp
Exit mobile version