Home ಟಾಪ್ ಸುದ್ದಿಗಳು ಉಕ್ರೇನ್’ನಿಂದ ವಾಪಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ

ಉಕ್ರೇನ್’ನಿಂದ ವಾಪಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯಲ್ಲಿ ಯಾವುದೇ ಅವಕಾಶವಿಲ್ಲದಿರುವುದರಿಂದ ಉಕ್ರೇನ್’ನಿಂದ ವಾಪಸಾದ ಭಾರತದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್’ಗೆ ತಿಳಿಸಿದೆ.

ಈ ಕಾಯ್ದೆಯಲ್ಲಿ ಸಡಿಲಿಕೆ ಮಾಡುವುದರಿಂದ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ ಅಡ್ಡಿಯಾಗುತ್ತದೆ ಎಂದು ಕೇಂದ್ರವು ಸುಪ್ರೀಮ್ ಕೋರ್ಟ್’ಗೆ ಸಲ್ಲಿಸಿದ ಅಫಿದವಿತ್’ನಲ್ಲಿ ಉಲ್ಲೇಖಿಸಿದೆ. ರಷ್ಯಾ ನಡೆಸಿದ ದಾಳಿಯಿಂದಾಗಿ ನಮ್ಮ ಶಿಕ್ಷಣ ಅರ್ಧಕ್ಕೆ ನಿಂತಿದ್ದು, ಉಕ್ರೇನ್’ನಿಂದ ವಾಪಸಾದ ನಮಗೆ ಪರಿಹಾರ ಒದಗಿಸುವಂತೆ ಕೋರಿ ಸಂತ್ರಸ್ತ ಭಾರತೀಯ ವಿದ್ಯಾರ್ಥಿಗಳು ಸುಪ್ರೀಮ್ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅಫಿಡವಿತ್ ಸಲ್ಲಿಸಿದ್ದಾರೆ.

NEET ನಲ್ಲಿ ಕಳಪೆ ಪ್ರದರ್ಶನ ಮತ್ತು ಅರ್ಹತೆಯ ಕೊರತೆಯಿಂದಾಗಿ ಈ ವಿದ್ಯಾರ್ಥಿಗಳು ವಿದೇಶಕ್ಕೆ ಕಲಿಯಲು ಹೋಗಿದ್ದಾರೆ ಎಂದು ಕೇಂದ್ರ ತಿಳಿಸಿದೆ. ಭಾರತದ ಪ್ರಧಾನ ವೈದ್ಯಕೀಯ ಕಾಲೇಜುಗಳಲ್ಲಿ ಕಳಪೆ ಮೆರಿಟ್ ಹೊಂದಿದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದು ಇತರ ದಾವೆ ಹೂಡಲು ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೇಂದ್ರವನ್ನು ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ, ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ, ಕೇಂದ್ರ ಸರ್ಕಾರದ ವಿನಂತಿ ಮೇರೆಗೆ ಈ ವಿಚಾರಣೆಯನ್ನು ಮುಂದೂಡಿದೆ.

Join Whatsapp
Exit mobile version