Home ಟಾಪ್ ಸುದ್ದಿಗಳು ಕೇರಳ ಬಾಂಬ್ ಸ್ಫೋಟದ ಕುರಿತು ಸುಳ್ಳು ಸುದ್ದಿ ಹರಡಿ ವಿಕೃತ ಮನಸ್ಥಿತಿ ಪ್ರದರ್ಶಿಸಿದ ಮಾಧ್ಯಮಗಳು:ತಾಹೀರ್ ಹುಸೇನ್

ಕೇರಳ ಬಾಂಬ್ ಸ್ಫೋಟದ ಕುರಿತು ಸುಳ್ಳು ಸುದ್ದಿ ಹರಡಿ ವಿಕೃತ ಮನಸ್ಥಿತಿ ಪ್ರದರ್ಶಿಸಿದ ಮಾಧ್ಯಮಗಳು:ತಾಹೀರ್ ಹುಸೇನ್

ಮಂಗಳೂರು: ನಿನ್ನೆ ಕೇರಳ ರಾಜ್ಯದಲ್ಲಿ ನಡೆದ ಬಾಂಬ್ ಸ್ಫೋಟ ಕುರಿತು ಸುಳ್ಳು ಸುದ್ದಿ  ಹರಡಿಸಿ ಕೆಲ ಮಾಧ್ಯಮಗಳು ವಿಕೃತ ಮನಸ್ಥಿತಿ ಪ್ರದರ್ಶಿಸಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.

ಕೇರಳದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಈಗಾಗಲೇ ಮಾರ್ಟಿನ್ ಎಂಬ ವ್ಯಕ್ತಿ  ನಿನ್ನೆ ಮಧ್ಯಾಹ್ನ ದೊಳಗೆ ಶರಣಾಗಿದ್ದು ಇಲ್ಲಿನ ಕೆಲವು ಮಾಧ್ಯಮಗಳಿಗೆ ತೀವ್ರ ಸ್ವರೂಪದ ಹತಾಶೆ ತರಿಸಿದೆ.  ಸ್ಫೋಟ ನಡೆದ ತಕ್ಷಣ ಮುಸ್ಲಿಮ್ ಸಮುದಾಯದ ಮೇಲೆ ಗೂಬೆ ಕೂರಿಸಲು ತೋರಿದ ಪ್ರಯತ್ನ ವಿಫಲವಾಗಿದ್ದರಿಂದ ಅವರು ಹತಾಶರಾಗಿದ್ದಾರೆ. ಪವರ್ ಟಿವಿ ಮುಸ್ಲಿಮ್ ಟೋಪಿಧಾರಿ ವ್ಯಕ್ತಿಯ ಫೋಟೋ ಹಾಕಿ ಸುಳ್ಳು ಹರಡಲು ತೀವ್ರ ಆತುರ ತೋರಿತ್ತು. ಪವರ್ ಮಾತ್ರವಲ್ಲ ಇನ್ನು ಕೆಲ ಮಾಧ್ಯಮಗಳು ಆತುರದ ವರದಿ ಪ್ರಕಟಿಸಿ ಈಗ ಕೈ ಹಿಚುಕಿಕೊಂಡಿದ್ದಾರೆ. ಕೆಲವು ಪೀತ ಮಾಧ್ಯಮಗಳು ಸಮಯೋಚಿತವಾಗಿ ವರ್ತಿಸುವ ಬದಲಿಗೆ ಸಮಾಜಘಾತುಕವಾಗಿ ವರ್ತಿಸಿತು ಅವರು ಹೇಳಿದ್ದಾರೆ.

ಆರೋಪಿ ಮುಸ್ಲಿಮ್ ನಾಮಧಾರಿಯಲ್ಲ ಎಂಬುದು ಅವರನ್ನು ಹತಾಶೆಗೊಳಗಾಗುವಂತೆ ಮಾಡಿದೆ. ಕೆಲವರು ಈ ಬಾಂಬ್‌ ಸ್ಫೋಟವನ್ನು ಇಸ್ರೇಲ್ ವಿರುದ್ಧದ ಪ್ರತಿಭಟನೆಗೆ ಜೋಡಿಸಿ ದ್ವೇಷ ಹಬ್ಬಿಸುವ ಎಲ್ಲ ಪ್ರಯತ್ನ ಮಾಡಿದರು ಎಂದು ತಾಜಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಟಿನ್ ಎಂಬಾತ ತಾನೇ ಬಾಂಬ್ ಇರಿಸಿದ್ದು ಎಂದು ತಪ್ಪೊಪ್ಪಿಕೊಂಡರೂ ಆತನನ್ನು ತೀವ್ರ ವಿಚಾರಣೆಗೊಳಪಡಿಸಬೇಕು. ವಾಸ್ತವ ವಿಚಾರ ಬಹಿರಂಗವಾಗಬೇಕು. ನೆರೆಯ ರಾಜ್ಯದಲ್ಲಿ ಈ ಘಟನೆ ನಡೆದರೂ ಕೆಲವು ಮಾಧ್ಯಮಗಳ ಪೂರ್ವ ಗ್ರಹ ಪೀಡಿತ ನಡೆಯು ಪ್ರಾಮಾಣಿಕ ಪತ್ರಕರ್ತರ ಮೇಲೆಯೂ ನಂಬಿಕೆ ಕಳಕೊಳ್ಳುವಂತೆ ಮಾಡುತ್ತಿದೆ. ಇಂತಹ ಸಮಾಜ ಘಾತುಕ ಪ್ರಕ್ರಿಯೆಯ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು  ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

Join Whatsapp
Exit mobile version