Home ಟಾಪ್ ಸುದ್ದಿಗಳು ಕಾಮನ್’ವೆಲ್ತ್ ಕ್ರೀಡಾಕೂಟ | ವೇಟ್’ಲಿಫ್ಟಿಂಗ್’ನಲ್ಲಿ ಬೆಳ್ಳಿ ಗೆದ್ದ ಭಾರತದ ಬಿಂದ್ಯಾರಾಣಿ

ಕಾಮನ್’ವೆಲ್ತ್ ಕ್ರೀಡಾಕೂಟ | ವೇಟ್’ಲಿಫ್ಟಿಂಗ್’ನಲ್ಲಿ ಬೆಳ್ಳಿ ಗೆದ್ದ ಭಾರತದ ಬಿಂದ್ಯಾರಾಣಿ

ಬರ್ಮಿಂಗ್’ಹ್ಯಾಮ್: ಪ್ರಸಕ್ತ ನಡೆಯುತ್ತಿರುವ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಭಾರತದ ವೇಟ್ ಲಿಫ್ಟರ್ ಬಿಂದ್ಯಾರಾಣಿ ದೇವಿ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕ್ರೀಡಾಪಟು ಬಿಂದ್ಯಾರಾಣಿ ಅವರ ಈ ಸಾಧನೆಯೊಂದಿಗೆ ಕಾಮನ್’ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ನಾಲ್ಕನೇ ಪದಕ ಲಭಿಸಿದಂತಾಗಿದೆ.

ಮಹಿಳೆಯರ ವೇಟ್’ಲಿಫ್ಟಿಂಗ್ ನ 55 ಕೆ.ಜಿ ವಿಭಾಗದಲ್ಲಿ ಬಿಂದ್ಯಾರಾಣಿ ಅವರು ಒಟ್ಟು 202 ಕೆ.ಜಿ ಅಂದರೆ 86 + 116 ಕೆ.ಜಿ ಭಾರವನ್ನು ಎತ್ತುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇದು ಕಾಮನ್’ವೆಲ್ತ್ ಪಂದ್ಯಾಕೂಟದಲ್ಲಿ ಅವರ ಗರಿಷ್ಠ ಸಾಧನೆ ಎಂದು ಹೇಳಲಾಗಿದೆ.

ಈ ಸ್ಪರ್ಧೆಯಲ್ಲಿ ತನ್ನ ಪ್ರತಿಸ್ಪರ್ಧಿ ನೈಜೀರಿಯಾದ ಅದಿಜಿತ್ ಅಡೆನಿಕೆ ಒಲರಿನೊಯ್ ಅವರು ಒಟ್ಟು 203 ಕೆಜಿ ಅಂದರೆ 92 + 111 ಕೆಜಿಯನ್ನು ಎತ್ತುವ ಮೂಲಕ ಅರ್ಹವಾಗಿಯೇ ಚಿನ್ನವನ್ನು ಗೆದ್ದರು. ಅಲ್ಲದೆ ಸ್ಥಳೀಯ ಆಟಗಾರ್ತಿ ಫ್ರೇರ್ ಮಾರೊ ಅವರು ಒಟ್ಟು 198 ಕೆಜಿ ಅಂದರೆ 86 + 109 ಕೆಜಿಯನ್ನು ಎತ್ತಿ ಮೂರನೇ ಸ್ಥಾನವನ್ನು ಸಂಪಾದಿಸಿದರು.

ಇದಕ್ಕೂ ಮೊದಲು ನಡೆದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಅವರು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಕೊಡುಗೆಯಾಗಿ ನೀಡಿದ್ದರು. ಅಲ್ಲದೆ ಸಂಗೇತ್ ಸರ್ಗರ್, ಗುರುರಾಜ್ ಪೂಜಾರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

Join Whatsapp
Exit mobile version