ಮಂಗಳೂರು: ಟೈಗರ್ ಕಾರ್ಯಾಚರಣೆ ಎಂಬ ಹೆಸರಿನಲ್ಲಿ ಬಡ ಬೀದಿಬದಿ ವ್ಯಾಪಾರಿಗಳ ವಾಹನಗಳನ್ನು ಪುಡಿ ಮಾಡಿ ಪೌರುಷ ತೋರಿಸುವ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಅಧಿಕಾರಿಗಳೇ ನಿಮಗೆ ದಮ್ಮು ತಾಕತ್ತು ಇದ್ದರೆ ಅಣಬೆ ಫ್ಯಾಕ್ಟರಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಸವಾಲು ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಟೈಗರ್ ಕಾರ್ಯಾಚರಣೆ ಎಂಬ ಹೆಸರಿನಲ್ಲಿ ಬಡ ಬೀದಿಬದಿ ವ್ಯಾಪಾರಿಗಳ ವಾಹನಗಳನ್ನು ಪುಡಿ ಮಾಡಿ ಪೌರುಷ ತೋರಿಸುವ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಅಧಿಕಾರಿಗಳೇ ನಿಮಗೆ ದಮ್ಮು ತಾಕತ್ತು ಇದ್ದರೆ ವಾಮಂಜೂರಿನ ಜನವಸತಿ ಪ್ರದೇಶದಲ್ಲಿ ಪರಿಸರಕ್ಕೆ ದುರ್ನಾತ ಬೀರುವ ಮಾಜಿ ಶಾಸಕರ ಒಡೆತನದ ವೈಟ್ ಗ್ರೋ ಎಂಬ ಅಣಬೆ ಫ್ಯಾಕ್ಟರಿಯ ವಿರುದ್ಧ ಕ್ರಮ ಕೈಗೊಂಡು ನಿಮ್ಮ ಪೌರುಷವನ್ನು ತೋರಿಸಿ ಎಂದು ಹೇಳಿದ್ದಾರೆ.
ಮಂಗಳೂರು ನಗರದ ಲೇಡಿಹಿಲ್ ಮಣ್ಣಗುಡ್ಡೆ ರಸ್ತೆಯ ಬೀದಿಬದಿ ಅಂಗಡಿಯನ್ನು ‘ಆಪರೇಷನ್ ಟೈಗರ್’ ಕಾರ್ಯಾಚರಣೆ ಅಡಿಯಲ್ಲಿ ನಿನ್ನೆ ತೆರವುಗೊಳಿಸಲಾಗಿತ್ತು. ಇನ್ನು ಕಾರ್ಯಾಚರಣೆಗೆ ಅಡ್ಡಿ ಪಡಿಸಿದವರನ್ನು ಕೂಡ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದರು.