ರಾಜ್ಯದಲ್ಲಿ ಸದ್ಯಕ್ಕಂತೂ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ: ಎಂಬಿ ಪಾಟೀಲ್

Prasthutha|

- Advertisement -

ವಿಜಯಪುರ: ವಿಜಯೇಂದ್ರರನ್ನು ಕೇವಲ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಕ್ಷ ಮಾಡಲಾಗಿದೆ. ವಿಜಯೇಂದ್ರ ಅವಧಿ ಕೇವಲ ಮೂರು ವರ್ಷ ಮಾತ್ರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಹೇಳಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗಿಂತ ಮೊದಲೇ ಅವರನ್ನು ಕೆಳಗಿಳಿಸಲಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಪಾಟೀಲ್, ಸದ್ಯಕ್ಕಂತೂ ಸಿಎಂ ಸೀಟು ಖಾಲಿ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ, ಅಲ್ಲಿಂದ ಏನೇ ನಿರ್ಣಯ ಬಂದರೂ ರಾಜ್ಯದ ನಾಯಕರು ತಲೆಬಾಗಿ ಸ್ವೀಕರಿಸುತ್ತಾರೆ ಎಂದು ಹೇಳಿದರು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿವೆ ಅಂತ ಕೇಳಿದಾಗ ಅವರು ಕನಿಷ್ಠ 20 ಸೀಟು ಸಿಗೋದು ನಿಶ್ಚಿತ 24 ಸಿಕ್ಕರೂ ಆಶ್ವರ್ಯವಿಲ್ಲ ಎಂದರು.



Join Whatsapp